ಕಲಬುರಗಿ: ಸಾವಿರಾರು ರೈತರ ಭೂಮಿ ವಕ್ಸ್ ಪಾಲಾಗುತ್ತಿದ್ದು, ಹಿಂದೂ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳೇ ಬದುಕಲು ಜಾಗ ಕೊಡಿ ಎಂದು ಬೇಡುವ ಸ್ಥಿತಿ ನಿರ್ಮಾಣ ಆಗುವ ಹಂತ ತಲುಪುತ್ತಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕರ್ನಾಟಕ ದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಮುಸ್ಲಿಂ ಸಮುದಾಯವನ್ನು ಅನಗತ್ಯವಾಗಿ ಓಲೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೆ ಕೇಂದ್ರ ಸರಕಾರ ಸಂಸತ್ ಅಧಿವೇಶನದಲ್ಲಿ ವಕ್ ಬೋರ್ಡ್ ವಿಧೇಯಕ ಚರ್ಚೆಗೆ ತಂದ ವೇಳೆ ಜಂಟಿ ಸಮಿತಿಗೆ ಒಪ್ಪಿಸಬೇಕೆಂಬ ತೀರ್ಮಾನವಾಗಿತ್ತು. ಆದರೆ ಸಮಿತಿಯ ವರದಿ ಹೊರಬರುವ ಮುನ್ನವೇ ಹಲವು ಅವಾಂತರಗಳನ್ನು ಸೃಷ್ಟಿಸಲಾಗುತ್ತಿದೆ. ಕೇವಲ ಮತಗಳಿಕೆಯ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಕಾಂಗ್ರೆಸ್ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.
”ದೇಶಾದ್ಯಂತ ವಕ್ಪ್ ನ ವಿಕಾರ ಸ್ವರೂಪ ರಾಕ್ಷಸ ರೂಪ ತಾಳುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಜೆಪಿಸಿ ಕಮಿಟಿಯು ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಅದಕ್ಕೂ ಪೂರ್ವದಲ್ಲೇ ಈ ಕುತಂತ್ರ ನಡೆಸಿ ರಾಜ್ಯದ ಕಾಂಗ್ರೆಸ್ ಸರಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ.” ಎಂದು ಅವರು ದೂರಿದರು. “ಸಚಿವ ಜಮೀರ ಅಹ್ಮದ್ ಜೊತೆ ಸಿಎಂ ಸಿದ್ರಾಮಯ್ಯ ಶಾಮೀಲಾಗಿ ರೈತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬ್ರಿಟಿಷ್ ಕಾಲದ ದೋಷಪೂರಿತ ಯೋಜನೆ ಮುಂದುವರೆಸಿಕೊಂಡು ತುಷ್ಠೀಕರಣ, ಮತ ಬ್ಯಾಂಕ್ ಸಲುವಾಗಿ ಕಾಂಗ್ರೆಸ್‌ನಿಂದ ರೈತರ ಮರಣ ಶಾಸನ ತರಲು ಪ್ರಯತ್ನಿಸಲಾಗುತ್ತಿದೆ ” ಎಂದು ಅವರು ಕಿಡಿಕಾರಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ