ಕೊಪ್ಪಳದ ಜಿಲ್ಲಾ ಆಡಳತ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ದ್ವೈ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಉದ್ಘಾಟಿಸಿದರು.
ಹೆಚ್ಚಿನ ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘ ಸಂಸ್ಥೆಗಳನ್ನು ಹಾಗೂ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.
ಮುಧೋಳ ಬಸವಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ೧೦ ವರ್ಷಗಳಿಂದ ಈ ವರೆಗೆ ೧೩ ರಕ್ತದಾನ ಶಿಬಿರಗಳನ್ನು,೩ ನೇತ್ರ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಆಯೋಜಿಸಿರುವದನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಬಸವಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ಶಿವಮ್ಮ ಶಿವಶರಣಪ್ಪ ಬಳಿಗಾರ ಸನ್ಮಾನ ಸ್ವೀಕರಿಸಿದರು.
ರಾಜ್ಯ ಸಭಾಪತಿಗಳು ಮಾತನಾಡಿ ಕೊಪ್ಪಳ ಜಿಲ್ಲಾ ಘಟಕ ೧೦ ವರ್ಷಗಳಿಂದ ಕರ್ನಾಟಕದಲ್ಲಿಯೇ ಅತ್ಯುತ್ತಮ ಸೇವೆ ಸಲ್ಲಿಸಿದೆ ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಹೊಂದಿದ ಅಂಬುಲೆನ್ಸ್ ನೀಡಲಾಗುವದೆಂದು ಪ್ರಶಂಸಿದರು.
ಈ ಕಾರ್ಯಕ್ರಮದಲ್ಲಿ ಸೋಮರಡ್ಡಿ ಅಳವಂಡಿ,ಡಾ.ಶ್ರೀನಿವಾಸಹ್ಯಾಟಿ,
ಡಾ.ದಾನರಡ್ಡಿ,ಡಾ.ಶಿವಕುಮಾರ ಪಾಟೀಲ,ಬಸಪ್ಪ ಅಕ್ಕಿ ವೀರಭದ್ರಪ್ಪ ನಿಡಗುಂದಿ, ಕುಷ್ಟಗಿ ರೆಡ್ ಕ್ರಾಸ್ ಮಲ್ಲಿಕಾರ್ಜುನ ಬಳಿಗಾರ ತಾಲೂಕ ಘಟಕಗಳ ಪದಾಧಿಕಾರಿಗಳು,ಸದಸ್ಯರು ಪಾಲ್ಗೊಂಡಿದ್ದರು.
ವರದಿ-ವಿಜಯಮಹಾಂತೇಶ ಬಳಿಗಾರ