ಬೀದರ: ಸಮಾಜದ ಹಲವು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರವಾಗಿ
ಹಗಲಿರುಳು ದುಡಿಯುತ್ತಿರುವ ಸಂಗಮೇಶ ಎನ್ ಜವಾದಿ ರವರ ಸೇವಾ ಕೈಂಕರ್ಯಗಳು ಜಗ ಮೆಚ್ಚುವಂಥದ್ದು ಎಂದು ಬಾಪು ರೂರಲ್ ಡೆವಲಪ್ಮೆಂಟ್ ಸಂಸ್ಥೆ ಅಧ್ಯಕ್ಷ ಕಾಶಿನಾಥ್ ಪಾಟೀಲ ನುಡಿದರು.
ನಗರದ ಬಾಪು ಬಾಪು ರೂರಲ್ ಡೆವಲಪ್ಮೆಂಟ್ ಕಛೇರಿಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸಂಗಮೇಶ ಎನ್ ಜವಾದಿ ರವರಿಗೆ ಗೌರವ ಸನ್ಮಾನ ಮಾಡಿ ಮಾತನಾಡಿದ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಹಗಾರರಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಪತ್ರಕರ್ತರಾಗಿ, ಪರಿಸರ ಸಂರಕ್ಷಕರಾಗಿ, ಮಕ್ಕಳ – ವಿಕಲಚೇತನರ – ಮಹಿಳೆಯರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಶ್ರೀಯುತರ ಸೇವಾ ಕೈಂಕರ್ಯಗಳು ಅನನ್ಯವಾಗಿವೆ. ಅನೇಕ ಜನಪರ, ರೈತಪರ, ಬಡವರ, ಅನಾಥ – ನೊಂದವರ ಪರವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜವಾದಿ ರವರ ಸೇವಾ ಕಾರ್ಯ ನಾಡಿಗೆ ಮಾದರಿಯಾಗಿದ್ದು. ಹಲವು ಸಮಸ್ಯೆಗಳ ಮಧ್ಯೆಯೂ ಸಾಮಾಜಿಕವಾಗಿ ದುಡಿಯುತ್ತಿದ್ದಾರೆ. ಇವರ ಹೃದಯ ವೈಶಾಲ್ಯತೆ ಬಹಳಷ್ಟು ದೊಡ್ಡದು.ಇಂತಹ ಮಾಹಾನ ತ್ಯಾಗ ಮೂರ್ತಿಗೆ ಸನ್ಮಾನ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಈ ಸಮಯದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.