ಕಲಬುರಗಿ / ಕಾಳಗಿ :ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ ಘಟಕ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ರವಿಕಿರಣ್ ಜಿ. ಮೈಲಾರ್ ಅವರ ಹುಟ್ಟುಹಬ್ಬದ ನಿಮಿತ್ತ ಮಂಗಲಗಿ ಗ್ರಾಮದಲ್ಲಿ ಧರ್ಮಗ್ರಂಥ ಭಗವದ್ಗೀತೆಯನ್ನು ಮನೆ ಮನೆಗೆ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ್ ಅರಣಕಲ್, ಅಣಿವೀರಯ್ಯ ಒಂಟೆತ್ತಿ, ಶಿವಶರಣ ಒಂಟೆತ್ತಿ, ಶ್ರೀನಿವಾಸ್ ಗೋಗಿ, ಸಂಗಮೇಶ್ ಪಾಟೀಲ್, ಅಕ್ಷಯ್ ಕುಲಕರ್ಣಿ, ಅಂಬರೀಷ್ ಮತ್ತು ಇತರರು ಭಾಗವಹಿಸಿದ್ದರು.
