ಮೈಸೂರು:ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಮೈಸೂರಿನಲ್ಲಿ
ಕನ್ನಡಿಗ ಯೋಧ ನಾ.ನಾಗಲಿಂಗ ಸ್ವಾಮಿ ಸಂಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೈಸೂರು: ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ
ಕನ್ನಡಿಗ ಯೋಧ ನಾ.ನಾಗಲಿಂಗಸ್ವಾಮಿ ಸಂಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ಸುವರ್ಣ ಸಂಭ್ರಮ ರಾಜ್ಯೋತ್ಸವ
ಪ್ರಶಸ್ತಿ ಪುರಸ್ಕೃತ ಶ್ರೀ ಮಡ್ಡೀಕೆರೆ ಗೋಪಾಲ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಇದೇ ವೇಳೆ ಮುಖ್ಯ ಅತಿಥಿಗಳು ನಾ.ನಾಗಲಿಂಗಸ್ವಾಮಿ ಅವರು ನಡೆದುಬಂದ ಹಾದಿ,ಅವರ ಕನ್ನಡಪರ ಹೋರಾಟಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಾದ ತೇಜಸ್ವಿ ನಾಗಲಿಂಗ ಸ್ವಾಮಿ, ವಿಶ್ರಾಂತ ಶಿಕ್ಷಕರಾದ
ಎ.ಸಂಗಪ್ಪ, ಎಚ್.ವಿ.ಮುರಳಿಧರ್, ವೆಂಕಟರಮಣ ಕಲಗಾರ್, ಗ್ರಂಥಪಾಲಕರಾದ ರಾಜಶೇಖರ್, ಖಾವುದರಾದ ರಮಾಮಣಿ ಅವರುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ರಘು ಕೌಟಿಲ್ಯ ಶ್ರೀ ಇಳೈ ಆಳ್ವಾರ್ ಸ್ವಾಮಿಜೀ, ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್, ವೈ ಡಿ ರಾಜಣ್ಣ, ಸಮಾಜ ಸೇವಕರಾದ ರಘುರಾಂ ವಾಜಪೇಯಿ, ಕವಯಿತ್ರಿ ಲತಾ ರಾಜಶೇಖರ್, ಖ್ಯಾತ ವೈದ್ಯ ಡಾ. ರಾಜಶೇಖರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.