ಬೆಂಗಳೂರು: ಒನಕೆ ಓಬವ್ವನ ವಿಚಾರ ಚರಿತ್ರೆ, ಗ್ರಂಥ ಪುಸ್ತಕ ಮತ್ತು ದಾಖಲೆಗಳಲ್ಲಿವೆ. ಅದು ನಾಡಿಗೆ ಪರಿಚಯವಾಗಬೇಕು, ಸರ್ಕಾರ ಈ ವೀರವನಿತೆಯ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಬೇಕು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ವೀರವನಿತೆ ಒನಕೆ ಓಬವ್ವ ಜಯಂತಿ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿರುವಂತೆ, ಒನಕೆ ಓಬವ್ವನ ಹೆಸರಲ್ಲೂ ಹೆಣ್ಣುಮಕ್ಕಳ ಶಾಲೆಗಳನ್ನು ತೆರೆದು, ಮಕ್ಕಳಿಗೆ ಆಕೆಯ ಶೌರ್ಯ, ಪರಾಕ್ರಮದ ಜೀವನ ಚರಿತ್ರೆಯನ್ನು ತಿಳಿಸಬೇಕು. ಏತಕ್ಕಾಗಿ ಆಕೆ ಚರಿತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ಮನವರಿಕೆ ಮಾಡಬೇಕು.
ಹಿಂದೆ ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ
ಪ್ರಸ್ತಾಪಿಸಿದ್ದೆ. ಈಗ ಜಯಂತಿಯ ಸಮಯವಾದ್ದರಿಂದ ಮತ್ತೊಮ್ಮೆ ನೆನಪಿಸಿದ್ದೇನೆ’ ಎಂದು ಹೇಳಿದರು.
‘ಸಾಧಕರು, ಮಹನೀಯರನ್ನು ಜಾತಿಯ ಚೌಕಟ್ಟಿನಲ್ಲಿ ನೋಡಬಾರದು. ಹಾಗೆಯೇ ಓಬವ್ವಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸ ಬಾರದು. ಆಕೆ ಈ ನಾಡಿನ ಸ್ತ್ರೀಕುಲದ ಧ್ರುವತಾರೆ. ಸರ್ವ ಜನಾಂಗಕ್ಕೂ ಸೇರಿದವರು’ ಎಂದು ಪ್ರತಿಪಾದಿಸಿದರು.
ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿಯೂ ಕಠಿಣವಾದ ಕಾನೂನು ಇದ್ದರೂ ನಿರಂತರವಾಗಿ ಮಹಿಳೆಯ ಮೇಲೆ ಶೋಷಣೆ ನಡೆಯುತ್ತಿದೆ ಇಂತಹ ಶೋಷಣೆಗಳ ವಿರುದ್ಧ ಮಹಿಳೆಯರು ಹೋರಾಡಲು ಒನಕೆ ಓಬವ್ವ ಪ್ರೇರಣೆಯಾಗಬೇಕು.
ಈ ಬಾರಿಯ ಕಾರ್ಯಕ್ರಮ ಹೆಚ್ಚು ಕಲಾವಿದನೊಳಗೊಂಡಂತೆ ಆಕರ್ಷಣಿಯವಾಗಿದ್ದು
ಹೆಚ್ಚುಕಲಾ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರವ ತಂದವು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹೇಳಿದರು.
ಓಬವ್ವ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ, ‘ನಾಡಿನ ಇತಿಹಾಸದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಚೆನ್ನ ಭೈರಾದೇವಿ, ಬೆಳವಡಿ ಮಲ್ಲಮ್ಮನಂತಹ ವೀರ ರಾಣಿಯರ ಹೆಸರಿನೊಂದಿಗೆ ಓಬವ್ವನ ಹೆಸರು ದಾಖಲಾಗಿದೆ. ವೀರ ರಾಣಿಯರ ನಡುವೆ, ಕೋಟೆಯ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೋರಾಡಿದ ಓಬವ್ವ ವೀರ ವನಿತೆಯಾಗಿ, ಅಸಾಮಾನ್ಯ ಮಹಿಳೆಯಾಗಿ ಕಾಣುತ್ತಾರೆ’ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಧರಣಿ ದೇವಿ ಮಾಲಗತ್ತಿಯವರು ಸ್ವಾಗತಿಸಿದರು.ಒನಕೆ ಓಬವ್ವನ ಜಯಂತಿಯನ್ನು ವ್ಯವಷಿತವಾಗಿ ಜೋಗಿಲ ಸಿದ್ದರಾಜು, ಸಬ್ಬನಹಳ್ಳಿ ರಾಜು, ಜೈ ಸಿಂಹ ಮತ್ತಿಕುಂಟೆ, ಕೃಷ್ಣಪ್ಪ ನೇತೃತ್ವ ವಹಿಸಿ ಯಶಸ್ವಿಗೊಳಿಸಿದರು.
ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ, ಬಲವಂತರಾವ್ ಪಾಟೀಲ್, ಬಂಜಾರ ಅಕಾಡೆಮಿ ಅಧ್ಯಕ್ಷ ಗೋವಿಂದಸ್ವಾಮಿ,ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟೌನ್ ಹಾಲಿಂದ ನಯನ ಸಭಾಂಗಣದವರೆಗೆ ಎಂಟಕ್ಕೂ ಹೆಚ್ಚು ಮೆರವಣಿಗೆ ಕಲಾತಂಡಗಳು ಒನಕೆ ಓಬವ್ವನ ಟ್ಯಾಬ್ಲೆಲೋ ಮೂಲಕ ಮೆರವಣಿಗೆ ಮಾಡಲಾಯಿತು. ವೇದಿಕೆಯಲ್ಲಿ 12 ಗಾಯನ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ
ಮೆರುಗು ತಂದವು.
ಪ್ರಕಾಶ್ ಮಲ್ಲಿಗೆವಾಡ ಧಾರವಾಡ ತಂಡ
ಅನುಷಾ ಆರ್ ಬೆಂಗಳೂರು ತಂಡ
ಸೌಮ್ಯಾ ಕೆ ನೃತ್ಯ ತಂಡಗಳು ನೆರೆದಿದ್ದ ಜನರನ್ನು ರಂಜಿಸಿದವು.
ಕೊನೆಯಲ್ಲಿ ಜಂಟಿ ನಿರ್ದೇಶಕ ಬಲವಂತ ಪಾಟೀಲ್ ವಂದಿಸಿದರು.