ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮೇಲಿನಹಲಕುರ್ಕಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಫೋಟೋಗೆ ಹೂವಿನ ಹಾರ ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಿಕ್ಕೆ ಕಾರಣೀಕರ್ತರಾದ ಗ್ರಾಮದ ಗುರು ಹಿರಿಯರನ್ನು ಹಾಗೂ ಯುವಕರನ್ನು ಸ್ವಾಗತಿಸಿ ಸನ್ಮಾನಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಮೇಲಿನ ಹಲಕುರ್ಕಿ ಗ್ರಾಮ ಘಟಕದ ಅಧ್ಯಕ್ಷರಾದ ಶಂಕ್ರಪ್ಪ ರಂಗಪ್ಪ ಹೂಲಗೇರಿ, ಉಪಾಧ್ಯಕ್ಷರು ರಂಗಪ್ಪ ಅಯ್ಯಪ್ಪ ತಾಳಿ ಹಾಗೂ ಗ್ರಾಮದ ಹಿರಿಯರಾದ ಕೇಲುಡಪ್ಪ ಹೂಲಗೇರಿ, ಪಾರಪ್ಪ ರಂಗಪ್ಪ ಬಂಡಿ, ಶಾಂತಪ್ಪ ಹೂಲಗೇರಿ, ಅಯ್ಯಪ್ಪ ನಿಂಗಪ್ಪ ತಾಳಿ, ಬಸಪ್ಪ ಘಂಟಿ, ಯಲ್ಲಪ್ಪ ಕಬ್ಬಲಗೇರಿ, ಫಕೀರಪ್ಪ ಹೂಲಗೇರಿ, ಯಮನಪ್ಪ ತಿರಕನ್ನವರ್, ಚಿದಾನಂದ ಮೊಟರಂಗಿ ಸೇರಿದಂತೆ ಗ್ರಾಮದ ಯುವಕರು ಉಪಸ್ಥಿತರಿದ್ದರು.ರಂಗಪ್ಪ ಕೆಲುಡೆಪ್ಪ ಹೂಲಗೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ-ಪರಶುರಾಮ ಬಂಡಿ