ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

“ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಳಕೆ ಶಿಕ್ಷಕರಿಗೆ ಅಗತ್ಯವಾಗಿದೆ – ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಅಭಿಮತ”

ಬೀದರ್: ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರ 2023-24ನೇ ಶೈಕ್ಷಣಿಕ ಸಾಲಿನ ಬಿ.ಎಡ್. ನಾಲ್ಕನೇ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಎರಡು ದಿನಗಳ ಪೌರತ್ವ ತರಬೇತಿ ಶಿಬಿರವನ್ನು ದಿನಾಂಕ : 12-11-2024 ಮತ್ತು 13-11-2024 ರಂದು ಶ್ರೀ ಕ್ಷೇತ್ರ ಅನಂತಶಯನ ಮಂದಿರ ಅಗ್ರಹಾರ, ಬೀದರನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ. ಬಿ.ಎಸ್. ಬಿರಾದಾರ, ಕುಲಪತಿಗಳು ಬೀದರ ವಿಶ್ವವಿದ್ಯಾಲಯ, ಬೀದರ ಅವರು ಮಾತನಾಡಿ, ಶಿಕ್ಷಕರಾಗುವವರಿಗೆ ಸರಿಯಾದ ತರಬೇತಿ, ಕೌಶಲ್ಯ, ಜ್ಞಾನ ನೀಡಿದಾಗ ಮಾತ್ರ ಮುಂದೆ ಅವರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲು ಸಾಧ್ಯ. ಮಕ್ಕಳಿಗೆ ಸರಿಯಾದ ದಾರಿಗೆ ತರುವ ಮಹತ್ಕಾರ್ಯ ಶಿಕ್ಷಕರ ಮೇಲಿದೆ. ಆಧುನಿಕ ಯುಗದಲ್ಲಿ ಜೀವನ ಸಾಗಿಸುವ ನಾವು ನಮ್ಮ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಬಹಳ ಪರಿಣಾಮ ಬೀರಿದ್ದು, ಜ್ಞಾನದ ಸಂಪಾದನೆಗೆ ಇದು ಅನುಕೂಲಕರವಾಗಿದೆ. ಆದರೆ ಮಾನವೀಯ ಮೌಲ್ಯಗಳು, ಸಮಾಜದ ಜವಾಬ್ದಾರಿ, ಸಂಬಂಧಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಶಿಕ್ಷಕರಾಗುವವರು ಇದರ ಸದುಪಯೋಗದ ಜೊತೆಗೆ ಹಿತವಾಗಿ-ಮಿತವಾಗಿ ಬಳಸಿಕೊಂಡು ಸಮಾಜದಲ್ಲಿ ಉತ್ತಮ ಮೌಲ್ಯಗಳ ಜೊತೆಗೆ ಜವಾಬ್ದಾರಿಯುತ ಪಾತ್ರವಹಿಸಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಗ್ರಾಮಗಳಲ್ಲಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಹಳ್ಳಿ ಜನತೆಯ ಸಂಸ್ಕøತಿ, ಸಂಸ್ಕಾರಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕು. ಜವಾಬ್ದಾರಿಯುತ ನಾಗರಿಕನಾಗಲು ಇಂತಹ ಶಿಬಿರಗಳು ಸಹಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶ್ರೀ ಇನಾಯತ್ ಸಿಂಧೆ ಅವರು ಎಲ್ಲಾ ಮೌಲ್ಯಗಳಿಗಿಂತ ಮಾನವೀಯ ಮೌಲ್ಯ ಮಹತ್ವವಾದದ್ದು, ಶಿಕ್ಷಕರ ವೃತ್ತಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದದ್ದು, ಶಿಕ್ಷಕರಾಗುವವರು ಶಿಕ್ಷಣದ ಜೊತೆಗೆ ನಾಯಕತ್ವದ, ಉತ್ತಮ ನಾಗರೀಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಅವರು ವಹಿಸಿ ಮಾತನಾಡಿ ಪೌರತ್ವ ತರಬೇತಿ ಶಿಬಿರವು ಶ್ರಮದ ಮಹತ್ವದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ, ಸಾಮುದಾಯಿಕ ಭಾಗವಹಿಸುವಿಕೆ, ಸಂಘ ಜೀವನ ಹೇಗೆ ನಡೆಸಬೇಕೆಂದು ಶಿಬಿರಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕರಾದ ಶ್ರೀಮತಿ ಶಿಲ್ಪಾ ಹಿಪ್ಪರಗಿ ಪ್ರಾಸ್ತಾವಿಕ ನುಡಿ ಹೇಳಿದರು. ಬಿವಿಬಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಠ್ಠಲ ರೆಡ್ಡಿ ಅವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ ಸಜ್ಜನ್, ಶ್ರೀಮತಿ ವೀಣಾ ಜಲಾದೆ, ಶ್ರೀ ರಾಜಕುಮಾರ ಸಿಂಧೆ, ನೂರ ಪಾಶಾ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಪಾಂಡುರಂಗ ಕುಂಬಾರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರೋಹಿತ, ಸ್ವರೂಪರಾಣಿ ನಿರೂಪಿಸಿದರು, ಸ್ನೇಹಾ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ