ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿಯ ಮುಗದಾಳ ಬೆಟ್ಟ ಗ್ರಾಮದ ಹೊಸ ಕೆರೆಯ ಏರಿಯಲ್ಲಿ ರಂದ್ರವಾಗಿ ನೀರು ಯಥೇಚ್ಛವಾಗಿ ಪೋಲಾಗುತ್ತಿರುವುದನ್ನು ನಿಲ್ಲಿಸಲು ಗ್ರಾಮ ಪಂಚಾಯಿತಿ,ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ತಾಲೂಕು ಆಡಳಿತದ ವತಿಯಿಂದ ನೀರು ಪೋಲಾಗುತ್ತಿರುವ ರಂಧ್ರಕ್ಕೆ ಚೀಲಗಳಲ್ಲಿ ಮಣ್ಣನ್ನು ತುಂಬಿ ನಿಲ್ಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಪ್ರಯತ್ನದಿಂದ ಕೆರೆಯ ಏರಿ ಒಡೆದು ಕೆರೆಯ ನೀರು ಸಂಪೂರ್ಣ ಕಾಲಿ ಹಾಗುವ ಸಂದರ್ಭವಿತ್ತು ಇಲಾಖೆ ಅಧಿಕಾರಿಗಳು ಎಚ್ಚೆತ್ತಿದ್ದರಿಂದ ಕೆರೆಯಲ್ಲಿನ ನೀರು ಕೇವಲ ಅರ್ಧ ಅಡಿಯಷ್ಟು ಮಾತ್ರ ರಂದ್ರದ ಮೂಲಕ ಪೋಲಾಗಿದೆ ಸದ್ಯದ ಪರಿಸ್ಥಿತಿಯಲ್ಲಿ ಮಣ್ಣು ತುಂಬಿದ ಚೀಲಗಳಿಂದ ಕೆರೆಯ ನೀರು ಪೋಲಾಗದಂತೆ ರಕ್ಷಿಸುತ್ತಿದ್ದು ಮುಂದಿನ ದಿನಗಳಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಕೆರೆಯ ಏರಿಯ ನೀರು ಪೋಲಾಗುತ್ತಿರುವ ರಕ್ಷಣೆ ಕೆಲಸ ಮಾಡಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರುವ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಕೃತಜ್ಞತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಸಿಲ್ದಾರ್ ವರದರಾಜು,ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಮಧುಗಿರಿ ವಿಭಾಗದ ಇ.ಇ. ಹನುಮಂತ ರಾಯಪ್ಪ,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್, ಜಿ.ಪಂ.ಎ.ಇ.ಇ. ಸುರೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ಪರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ಪ್ರಮೀಳಾ ನರಸಿಂಹಮೂರ್ತಿ, ಗೋಪಾಲಪ್ಪ ಗ್ರಾಮದ ಮುಖಂಡರುಗಳಾದ ಭಾಸ್ಕರ್ ನಾಯಕ,ಪಾಳೆಗಾರ ಲೋಕೇಶ್,ಓಂಕಾರ ನಾಯಕ, ಮೂರ್ತಿ ಮುಂತಾದವರು ಹಾಜರಿದ್ದರು.
ವರದಿ ಕೆ. ಮಾರುತಿ ಮುರಳಿ