ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಉತ್ತಮ ನಾಯಕರಿಂದ ಅಭಿವೃದ್ದಿ ಸಾಧ್ಯ

ಶಿವಮೊಗ್ಗ : ಉತ್ತಮ ನಾಯಕರಿಂದ ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಿದ್ದು, ಮಕ್ಕಳು ಮುಂದಿನ ಸಮರ್ಥ ನಾಯಕರಾಗಿ ಹೊರ ಹೊಮ್ಮಬೇಕು ಅದಕ್ಕೆ ಯುವ ಸಂಸತ್ ಕಾರ್ಯಕ್ರಮ ಸ್ಪೂರ್ತಿಯಾಗಲಿ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಆಶಿಸಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಕಾಲೇಜು ವಿಭಾಗ, ಆರ್ಯ ವಿಜ್ಞಾನ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ಮಹಾನಗರಪಾಲಿಕೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ 2024-25 ನೇ ಸಾಲಿನ ಪದವಿಪೂರ್ವ ಕಸಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿ ದೆಸೆಯಲ್ಲಿಯೇ ಚುನಾವಣಾ ಪ್ರಕ್ರಿಯೆ, ಪ್ರಜಾಪ್ರಭುತ್ವ ವ್ಯವಸ್ಥೆ, ನಾಯಕರನ್ನು ಆಯ್ಕೆ ಪ್ರಕ್ರಿಯೆ ಕುರಿತು ಒಂದು ಪರಿಕಲ್ಪನೆ ನೀಡುತ್ತಿದೆ. ಯುವ ಸಂಸತ್ ಕಾರ್ಯಕ್ರಮದ ಮೂಲಕ ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಸೆಕ್ಷನ್ ಅಧಿಕಾರಿ ಸಂತೋಷ್, ವಿದ್ಯಾರ್ಥಿಗಳಿಗೆ ಸದನ ನಡೆಸುವ ಕುರಿತಾದ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಯುವ ಸಂಸತ್ ಕಾರ್ಯಕ್ರಮದ ಸಂಚಾಲಕ ಪ್ರಭಾಕರ್, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಕಚೇರಿ ಉಪನಿರ್ದೇಶಕಿ ಪುಷ್ಪಾ ವಿ ಎಂ, ಜಿಲ್ಲಾ ಪ.ಪೂ ಕಾಲೇಜುಗಳ ಉಪನ್ಯಾಸಕ ಸಂಘದ ಅಧ್ಯಕ್ಷ ಯೋಗೀಶ್, ಜಿಲ್ಲಾ.ಸ.ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಡರೀನಾಥ್, ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಘನಶ್ಯಾಮ ಆರ್.ಸಿ, ಆರ್ಯ ವಿಜ್ಞಾನ ಪಿಯು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್, , ಉಪನ್ಯಾಸಕ ರವಿಕುಮಾರ್ ಇತರರು ಪಾಲ್ಗೊಂಡಿದ್ದರು.
ಯುವ ಸಂಸತ್ ಅಧಿವೇಶನ :
ಅಧಿವೇಶನ ಕಲಾಪದ ಆರಂಭದಲ್ಲಿ ರಾಷ್ಟ್ರಪತಿಗಳು, ಜಂಟಿ ಸದನ ಉದ್ದೇಶಿಸಿ ಮಾತನಾಡಿದರು. ನಂತರ ನೂತನವಾಗಿ ಆಯ್ಕೆಯಾದ ಸಚಿವರಿಗೆ ಪ್ರಮಾಣ ವಚನ ಬೋಧಿಸಿ, ಸದನವನ್ನು ನಿರ್ಗಮಿಸಿದರು.
ಸಭಾಧ್ಯಕ್ಷರು(ಸ್ಪೀಕರ್) ಆಗಮಿಸಿ, ಸದನ ಉದ್ದೇಶಿಸಿ ಮಾತನಾಡಿ, ಮೊದಲಿಗೆ ಸಂತಾಪ ಸೂಚನೆ ಪ್ರಸ್ತಾಪಿಸಿ ಇತ್ತೀಚಿಗೆ ಅಗಲಿದ ಮಹನೀಯರಾದ ರತನ್ ಟಾಟಾ ಮತ್ತು ಎಂ.ಎಸ್.ಸ್ವಾಮಿನಾಥನ್ ರವರ ಆತ್ಮಕ್ಕೆ ಶಾಂತಿ ಕೋರಿದರು.
ಪ್ರಧಾನ ಮಂತ್ರಿ ಹುದ್ದೆ ನಿರ್ವಹಿಸಿದ ರಾಮನಗರ ಜಿಲ್ಲೆಯ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ರವಿಕುಮಾರ್ ಹಾಗೂ ವಿರೋಧ ಪಕ್ಷದ ನಾಯಕಿ ಹಾಸನ ಜಿಲ್ಲೆಯ ವರ್ಷಾ ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಅಗಲಿದ ಮಹನೀಯರ ಕುರಿತು ಮಾತನಾಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ನಾಯಕಿ ಕೃತಕ ಬುದ್ದಿಮತ್ತೆಯ ಬಳಕೆಯಿಂದ ಅನುಕೂಲಕ್ಕಿಂತ ದುಷ್ಪರಿಣಾಮಗಳೇ ಹೆಚ್ಚಾಗಿದೆ. ಎಐ ಬಳಸಿ ಬ್ಯಾಂಕ್ ಖಾತೆಯಿಂದ ಬಡವರ ಹಣ ಕದಿಯಲಾಗುತ್ತಿದೆ. ಚಾಟ್ ಜಿಪಿಟಿ ಬಳಸಿ ಅಮೆರಿಕಾದಲ್ಲಿ ಯುವಕ ಮರಣ ಹೊಂದಿದ್ದಾನೆ. ಎಐ ಕುರಿತಾದ ಹೊಸ ಕಾಯ್ದೆಯಿಂದ ಯಾವ ಉಪಯೋಗವಿದೆ ಮತ್ತು ದುಷ್ಪರಿಣಾಮ ತಡೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ಹಾಗೂ ಆಡಳಿತ ಪಕ್ಷದ ಸದಸ್ಯರು ಉತ್ತರಿಸಿ, ದೇಶ ಅಭಿವೃದ್ಧಿ ಹಾಗೂ ಒಳಿತಿಗಾಗಿ ಎಐ ಅವಶ್ಯಕತೆ ಇದೆ. ಅಮೇರಿಕಾದ ಉದಾಹರಣೆ ಅಪ್ರಸ್ತುತವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಐ ನ್ನು ನಮಗೆ ಅನುಕೂಲವಾಗುಂತೆ ಬಳಸಲಾಗುತ್ತಿದೆ. ಹೊಸ ಕಾಯ್ದೆಯ ದೇಶದ ಅಭಿವೃದ್ದಿಗೆ ಅನುಕೂಲಕರವಾಗಿದೆ ಎಂದು ಉತ್ತರಿಸಿದರು.
ವಿರೋಧ ಪಕ್ಷದ ಸದಸ್ಯರು, ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿ ಯಲ್ಲಿ ಕೇವಲ 6.6% ಮೀಸಲಿಟ್ಟರೆ ಕೌಶಾಲಾಭಿವೃದ್ದಿ ಹೇಗೆ ಸಾಧ್ಯ ಹಾಗೂ ನೀಟ್ ಬರೆಯುವ ಸಾವಿರಾರು ಜನರಲ್ಲಿ ಕೆಲವರಿಗೆ ಮಾತ್ರ ಅವಕಾಶ. ಉಳಿದವರ ಪಾಡೇನು ಹಾಗೂ ವಾಣಿಜ್ಯ, ಕಲಾ ವಿಭಾಗದ ಪದವೀಧರರ ನಿರುದ್ಯೋಗ ಸಂಖ್ಯೆ ಹೆಚ್ಚಿದ್ದು ಇದಕ್ಕೇನು ಕ್ರಮ ಎಂದು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ಉತ್ತರಿಸಿ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ಮತ್ತು ಉದ್ಯೋಗದ ದೃಷ್ಟಿಯಿಂದ ಅನೇಕ ಸುಧಾರಣೆಯನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ತರಲಾಗಿದೆ ಎಂದರು.
ಆಡಳಿತ ಪಕ್ಷದ ಇಶಾನ್ ಉತ್ತಿರಿಸಿ, ಮೊದಲಿಗೆ ಹೋಲಿಸಿದರೆ ನಿರುದ್ಯೋಗ ಸಂಖ್ಯೆ ಕಡಿಮೆಯಾಗಿದೆ. ಶೇ.4 ಇಳಿಕೆಯಾಗಿದ್ದು, ನಿರುದ್ಯೋಗಕ್ಕೆ ಜಾಗತಿಕ ವಿದ್ಯಮಾನಗಳೂ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಾವಕಾಶ ಒದಗಿಸುವ ಭರವಸೆ ನೀಡಿದರು.
ವಿರೋಧ ಪಕ್ಷದ ಸದಸ್ಯ ಬೆಳಗಾವಿಯ ರಾಕೇಶ್ ಬಸವರಾಜ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ತಂಬಾಕಿನ ಬೆಲೆಯಲ್ಲಿ ತಾರತಮ್ಯ.ಮಾಡಲಾಗುತ್ತಿದೆ. ರಾಜ್ಯದ ರೈತರಿಗೆ ಇದರಿಂದ ನಷ್ಟವಾಗುತ್ತಿದೆ ಇದಕ್ಕೆ ಕಾರಣವೇನು, ಸರಿಪಡಿಸಲು ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು.
ಮಂಡ್ಯದ ಚೇತನ್ ಆಡಳಿತ ಪಕ್ಷದ ಸದಸ್ಯ ಉತ್ತರಿಸಿ, ಗುಣಮಟ್ಟದ ಆಧಾರದ ಮೇಲೆ ದರ ನಿರ್ಧಾರ ಆಗುತ್ತದೆ. ತಂಬಾಕು ಬೆಲೆಯಲ್ಲಿ ತಾರತಮ್ಯ ಮಾಡಲಾಗುತ್ತಿಲ್ಲವೆಂದು ಉತ್ತಿರಿಸಿದರು.
ವಿರೋಧ ಪಕ್ಷದ ಸದಸ್ಯರು ಮಾತನಾಡಿ, ಭಾರತ-ಪಾಕಿಸ್ಥಾನದ ನಡುವಿನ ಸಿಂಧೂ ನದಿ ನೀರಿನ ವಿವಾದ ಕುರಿತು ಕೈಗೊಂಡ ಕ್ರಮದ ಬಗ್ಗೆ ಹಾಗೂ ವಿಶ್ವ ಬ್ಯಾಂಕ್‌ನಲ್ಲಿ ಇನ್ನು 17 ಪ್ರಕರಣ ಬಾಕಿ ಇದ್ದು ಮರು ಸಂಧಾನದ ಕುರಿತು ಕೈಗೊಂಡ ಕ್ರಮ ಬಗ್ಗೆ ಪ್ರಶ್ನಿಸಿದರು.
ಪ್ರಧಾನಿಯವರು ಹಾಗೂ ಮಂಡ್ಯದ ಕಿಶನ್ ಆಡಳಿತ ಪಕ್ಷದ ಸದಸ್ಯರು ಮಾತನಾಡಿ, ಇದು ಎರಡೂ ದೇಶಗಳಿಗೆ ಅನುಕೂಲವಾಗಲೆಂದು ಮಾಡಿತ್ತಿರುವ ಒಪ್ಪಂದ. ಸಮಸ್ಯೆ ಪರಿಹರಿಸಲು ವಿಶ್ವ ಬ್ಯಾಂಕ್ ಪ್ರಯತ್ನಿಸುತ್ತಿದೆ ಎಂದರು.
ರಾಯಚೂರಿನ ಸನ್ನತಿ ವಿರೋಧ ಪಕ್ಷದ ಸದಸ್ಯಳಾಗಿ ಆರ್ಟಿಕಲ್ 371 ಜೆ ಹೈದರಾಬಾದ್ ಕರ್ನಾಟಕ ಹುದ್ದೆಗಳಲ್ಲಿ ಕ್ಲಾಸ್ ‘ಎ’ ವರ್ಗದಲ್ಲಿ ಮೀಸಲಾತಿ ಏಕಿಲ್ಲ. ಇದರಿಂದ ಕ್ಲಾಸ್ ಎ ಅಧಿಕಾರಿ ವರ್ಗಕ್ಕೆ ಸ್ಪರ್ಧಿಸುವವರಿಗೆ ಅನಾನುಕೂಲವಾಗುತ್ತಿದ್ದು. ಏನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನಿಸಿದರು.
ಆಡಳಿತ ಪಕ್ಷದ ಸದಸ್ಯರು, ಈ ಬಿಲ್‌ನ್ನು ತಮ್ಮ ಸರ್ಕಾರದ ಅವಧಿಯಲ್ಲಿ ತಾವೇ ಪಾಸ್ ಮಾಡಿರುವುದು ಎಂದರು.
ಮೈಸೂರಿನ ಸಮ್ಮಿತ ವಿರೋಧ ಪಕ್ಷದ ಸದಸ್ಯಳಾಗಿ ಇತ್ತೀಚೆಗೆ ಸೈಬರ್ ಬೆದರಿಸುವಿಕೆ ಹೆಚ್ಚುತ್ತಿದ್ದು, ಮಕ್ಕಳ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಇದಕ್ಕೆ ಏನು ಕ್ರಮ ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೋಕ್ಷಿತ್ ಎಸ್ ಬಂಗೇರಾ ಆಡಳಿತ ಪಕ್ಷದ ಸಚಿವನಾಗಿ ಸೈಬರ್ ಬೆದರಿಸುವಿಕೆ ನಿಯಂತ್ರಿಸಲು ಸರ್ಕಾರ ಕ್ರಮ ವಹಿಸಿದೆ. ಕಾಲಮಿತಿಯೊಳಗೆ ಸೈಬರ್ ಬೆದರಿಕೆಗೆ ಸಂಬಂಧಿಸಿದ ಸೈಟ್‌ನ್ನು ಡಿ-ಆಕ್ಟಿವೇಟ್ ಮಾಡಿ ಕ್ರಯ ಕೈಗೊಳ್ಳಲಾಗಿದೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಚಿತ್ರದುರ್ಗದ ಆಯಿಷಾ ಆರ್ ವಿರೋಧ ಪಕ್ಷದ ಸದಸ್ಯಳಾಗಿ, ರಾಜ್ಯದಲ್ಲಿ ಮಹಿಳೆಯರ ವಿರುದ್ದ ದೌರ್ಜನ್ಯ ನಡೀತಾ ಬಂದಿದೆ. ಹೆಣ್ಣಿನ ರಕ್ಣಣೆಗೆ ಏನು ಕ್ರಮ ವಹಿಸಲಾಗಿದೆ ಎಂದರು
ಶಿವಮೊಗ್ಗದ ಮೇಘನ್ ಆಡಳಿತ ಪಕ್ಷದ ಸಚಿವರಾಗಿ ಉತ್ತಿರಿಸಿ, ಮಹಿಳೆಯರಿಗೆ ಶೇ. 33 ಮೀಸಲಾತಿ ನಿಡಲಾಗಿದೆ. ಮಹಿಳೆಯರ ರಕ್ಷಣೆಗೆ ಸಹಾಯವಾಣಿ, ಪೊಲೀಸರು ಸದಾ ಸಿದ್ದರಾಗಿದ್ದಾರೆ ಎಂದರು.
ಗೃಹಸಚಿವರಾದ ಮಂಡ್ಯದ ಚೇತನ್ ಮಾತನಾಡಿ, ಮಹಿಳೆಯರ ರಕ್ಷಣೆಗೆ ಹಲವಾರು ಕಾಯ್ದೆಗಳು, ಭೇಟಿ ಬಚಾವೋ ಭೇಟಿ ಪಡಾಯೋ, ಮಹಿಳಾ ಶಕ್ತಿ ಕೇಂದ್ರಗಳು, ಪಡೆಗಳು, ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.
ಚಿತ್ರದುರ್ಗದ ಪ್ರಿಯ ಜೆ ವಿರೋಧ ಪಕ್ಷದ ಸದಸ್ಯಳಾಗಿ, ಪ್ರಧಾನಿಯವರು ಉಕ್ರೇನ್-ರಷ್ಯಾ ಯುದ್ದದ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೇ ರಕ್ಷಣೆ ಇಲ್ಲ. ಅದಕ್ಕೆ ಕೊಲ್ಕತ್ತಾ ವೈದ್ಯ ಮೇಲೆ ಅತ್ಯಾಚಾರ ಕೊಲೆ, ಶಿಶು ಮೇಲಿನ ಅತ್ಯಾಚಾರಗಳೇ ಸಾಕ್ಷ್ಯ ಎಂದರು. ಆಡಳಿತ ಪಕ್ಷದ ಮೈಸೂರಿನ ಸೃಜನ್ ಉತ್ತರಿಸಿ, ಅಂತಹ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮಹಿಳೆಯರು ಮಕ್ಕಳ ರಕ್ಷಣೆಗೆ ಅನೇಕ ಕಾನೂನು ಜಾರಿಗೊಳಿಸಲಾಗಿದೆ ಎಂದರು.
ವಿರೋಧ ಪಕ್ಷದ ಸದಸ್ಯೆ ಉಡುಪಿಯ ವರಲಕ್ಷ್ಮಿ ಅತಿವೃಷ್ಟಿ,ಬೆಳೆ , ಮನೆ ಹಾನಿಯಿಂದ ಬೀದಿಪಾಲಾದ ರೈತರ ಬಗ್ಗೆ ವಹಿಸಲಾದ ಕ್ರಮದ ಬಗ್ಗೆ ಪ್ರಶ್ನಿಸಿದರು.

ಗಮನ ಸೆಳೆದ ಡೆಪ್ಯುಟಿ ಸ್ಪೀಕರ್:
ಸಭಾಧ್ಯಕ್ಷರ ವಿರಾಮದ ವೇಳೆ ಸದನ ಕಲಾಪ ಮುಂದುವರೆಸಿದ ಹಾಸನದ ಗಣೇಶ್ ವಿ.ಪಿ ತಮ್ಮ ವಿಶಿಷ್ಟ ವೈಖರಿ, ಭಾಷೆ, ದೇಹ ಭಾಷೆಯಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಮೊಬೈಲ್ ಬಳಕೆ ಮಾಡುತ್ತಿದ್ದಾರೆಂದು ಸುಳ್ಳು ಹೇಳಿದ ಆಡಳಿತ ಪಕ್ಷದ ಸದಸ್ಯರನ್ನೇ ಸದನದಿಂದ ಅಮಾನತು ಮಾಡಿದರು.
ಶೂನ್ಯ ವೇಳೆಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದ ವಿಷಯ, ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳಿಗೆ ಒಳ ಮೀಸಲಾತಿ, ರಾಷ್ಟ್ರೀಯ ಶಿಕ್ಷಣ ನೀತಿ/ರಾಜ್ಯ ಶಿಕ್ಷಣ ನೀತಿ ಕುರಿತು ಚರ್ಚಿಸಲಾಯಿತು.
ಮಹಿಳೆಯರ ಮೇಲಾಗುತ್ತಿರು ದೌರ್ಜನ್ಯ, ನೈಸರ್ಗಿಕ ವಿರೋಪಗಳು, ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಮಿಶ್ರಣದ ಕುರಿತು ಗಮನ ಸೆಳೆಯುವ ಸೂಚನೆಗಳನ್ನು ಮಾಡಲಾಯಿತು.
ನಂತರ ವಿಧೇಯಕ ಮಂಡನೆ ಮಾಡಿ, ಪರಿಶೀಲಿಸಿ ಚರ್ಚೆ ನಡೆಸಿ ಅಂಗೀಕರಿಸಲಾಯಿತು.
ಜಿಲ್ಲೆಯಿಂದ ತಲಾ ಇಬ್ಬರಂತೆ ಒಟ್ಟು 62 ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಿ. ಸಾನಿಕ ಚೌಹಾಣ್ ಶಿವಮೊಗ್ಗ ರಾಷ್ಟçಪತಿಯಾಗಿ. ರಾಕೇಶ್ ಬಸವರಾಜ ಅಂಬರಶೆಟ್ಟಿ ಬೆಳಗಾವಿ ಸಭಾಧ್ಯಕ್ಷರಾಗಿ, ಗಣೇಶ ವಿ.ಪಿ ಹಾಸನ ಉಪ ಸಭಾಧ್ಯಕ್ಷರು, ರವಿಕುಮಾರ್ ರಾಮನಗರ ಪ್ರಧಾನಮಂತ್ರಿ, ವರ್ಷ ಹಾಸನ ವಿರೋಧಪಕ್ಷದ ನಾಯಕಿಯಾಗಿ, ಚೇತನ್ ಬಿ.ಹೆಚ್ ಮಂಡ್ಯ ಗೃಹಸಚಿವರು, ಮೋಕ್ಷಿತ್ ಎಸ್ ಬಂಗೇರಾ ದಕ್ಷಿಣಕನ್ನಡ ರಕ್ಷಣ ಸಚಿವರಾಗಿ, ನವ್ಯಶ್ರೀ ಸಿ ಬಳ್ಳಾರಿ ಸಂಸದೀಯ ವ್ಯವಹಾರಗಳ ಸಚಿವೆ, ಚೈತ್ರ ಜೆ ಚಿಕ್ಕಬಳ್ಳಾಪುರ ವಿದೇಶಾಂಗ ವ್ಯವಹಾರಗಳ ಸಚಿವರು, ಹರಿ ವಿ ಬೆಂಗಳೂರು ದಕ್ಷಿಣ ಸಾರಿಗೆ ಮತ್ತು ಸಂಪರ್ಕ ಖಾತೆ ಸಚಿವರಾಗಿ ಪಾಲ್ಗೊಂಡಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ