ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬರಹಗಾರರ ಬಳಗದ ವತಿಯಿಂದ ತಾಲೂಕು ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಪಾಟೀಲ್ ರವರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಮುಂಬರುವ ಕಾರ್ಯಕ್ರಮದ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದರು. ಆಯ್ಕೆಯಾಗಿರುವ ಹೊಸ ಪದಾಧಿಕಾರಿಗಳಾದ ಪಿ ಎಮ್ ಮಠ ಗೌರವ ಅಧ್ಯಕ್ಷರು ಬರಹಾಗಾರರ ಸಂಘ ಜೇವರ್ಗಿ,ಶರಣಗೌಡ ಜೈನಾಪೂರ ಗೌರವ ಸಲಹೆಗಾರು,ಬಸವರಾಜ ಬಾಗೇವಾಡ,ಮಹಾದೇವಿ ಗಂಟಿ ಮಠ,ಉಮಾದೇವಿ ಗಂಟಿ ಮಠ ಕಾರ್ಯದರ್ಶಿಗಳು,ಕವಿತಾ ಪಾಟೀಲ್,ಸದಾನಂದ ಪಾಟೀಲ್,ಸಂಘಟನಾ ಕಾರ್ಯದರ್ಶಿಗಳಾದ ಸುಧಾ ಬೆಣ್ಣೂರ ಮತ್ತು ಜ್ಯೋತಿ ಸಾಲಿಮಠ,ರಾಜು ಮುದ್ದಡೊಗಿ,ಮಾಧ್ಯಮ ಸಲಹೆಗಾರರಾದ ಮರೆಪ್ಪ ಬೇಗಾರ,ಚಂದ್ರಶಾಗೌಡ ಮಾಲಿ ಪಾಟೀಲ್,ಖಜಾಂಚಿ ಬಸಯ್ಯ ಹಿರೇಮಠ,ಸದಸ್ಯರುಗಳಾದ ವಿಜಯ ಲಕ್ಷ್ಮೀ ಪಾಟೀಲ್ ಹಾಗೂ ಸರ್ವಮಂಗಳ ಹಿರೇಮಠ ಹಾಗೂ ಇತರರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಾಧಕರಿಗೆ “ಅಡುಗೆ ಮನೆ ಸಾಧಕಿಗೆ ಒಂದು ವೇದಿಕೆ” ಎಂದು ಸಾಧಕರನ್ನು ಗುರ್ತಿಸಲು ನವ ಸಂಘಟನೆಯೊಂದು ಪ್ರಾರಂಭಿಸಿ,ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರ್ತಿಸಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಜ್ಯೋತಿ ಪಾಟೀಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ಪಿ ಎಮ್ ಮಠ,ಸದಾನಂದ ಪಾಟೀಲ್,ಸುಧಾ ಬೆಣ್ಣೂರ,ಕವಿತಾ ಪಾಟೀಲ್,ಬಸಯ್ಯ ಹಿರೇಮಠ ಇನ್ನಿತರರ ಸಮ್ಮುಖದಲ್ಲಿ ಸಂಘಕ್ಕೆ ಸೇರ್ಪಡೆ ಮಾಡಿ ಕೆಲವು ನಿರ್ಣಯವನ್ನು ಮಾಡಿದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್