ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು. ಆ ಮಗುವಿಗೆ ಹಸಿವು ತಾಳಲಾರದೆ ಆಲದ ಮರದ ಕೆಳಗೆ ಅರಳಿ ಕಾಯಿ, ಹಣ್ಣುಗಳು ಉದುರಿ ಬಿದ್ದ ಹಣ್ಣುಗಳು ಕುಳಿತು ತಿನ್ನಲು ಪ್ರಾರಂಭಿಸಿದನು. ಇತ್ತ ಆಟ ಆಡಲು ಬಂದ ಮಕ್ಕಳು ತಮ್ಮ ಮನೆಯಿಂದ ಏನೂ ತಂದಿದ್ದನು ತಿನ್ನಲು ಪ್ರಾರಂಭಿಸಿದರು. ಮರದ ನೆರಳಿನ ಅಡಿಯಲ್ಲಿ ಕುಳಿತು ತಿನ್ನಲು ಮಕ್ಕಳಿಗೆ ಬಲು ಇಷ್ಟ ಎಕೆಂದರೆ ? ನಿಸರ್ಗದ ಮಹಿಮೆ ಹಾಗೆಯೇ ಮನೆಯಲ್ಲಿ ಊಟ ಮಾಡಿ ಅಂದ್ರೆ ಮಗು ಊಟ ಹೊರಗೆ ತೆಗೆದುಕೊಂಡು ಹೋಗಿ ತಿನ್ನಲು ಇಷ್ಟಪಡುವ ಮಕ್ಕಳೇ ಜಾಸ್ತಿ ಅದಕ್ಕಾಗಿ ಮರ ಹೇಳುತ್ತದೆ” ನಾನು ಅಂದ್ರ ಮಕ್ಕಳಿಗೆ ಇಷ್ಟ ಮಕ್ಕಳು ನೆರಳಿನಲ್ಲಿ ಆಡಿದರೆ ನನ್ನಗೆ ಇಷ್ಟಾ” ಹಾಗಂತ ನಿಮ್ಮ ಮನೆ ಮುಂದೆ ಒಂದು ಮರ ನೆಟ್ಟು ನೀರು ಹಾಕಿ ಬೆಳಸಿದರೆ ನಿಮ್ಮ ಮುಂದಿನ ಯುವ ಪೀಳಿಗೆಗೆ ನಿಸರ್ಗದ ಶುದ್ಧ ಗಾಳಿ ಉತ್ತಮ ನೆರಳು, ನಮ್ಮ ಆರೋಗ್ಯ ಭಾಗ್ಯವಾಗಿರಲು, ಮೊದಲು ಮನೆಯ ಪರಿಸರದಲ್ಲಿ ಮನೆಗೊಂದು ಮರ,ಶಾಲೆಗೊಂದು ಗಿಡ ನೆಟ್ಟು ನಿಸರ್ಗ ಹಸಿರುಮನೆಯಾಗಿ ಮಾಡಿದರೆ ಯುವ ಪೀಳಿಗೆಗೆ ಸುಂದರ ಸ್ವಚ್ಛಂದ ವಾತಾವರಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅದಕ್ಕಾಗಿ ನಮ್ಮ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲು ಏನನ್ನು ಮಾಡಬೇಕು? ಮಕ್ಕಳಿಗೆ
ನಾವು ಹೆಚ್ಚು- ಹೆಚ್ಚು ಗಿಡಮರಗಳನ್ನುಹಚ್ಚಲು ಹೇಳುವುದು, ತದನಂತರ ಹುಟ್ಟು ಹಬ್ಬದ ನೆನಪಿನ ಕಾಣಿಕೆಗೆ ಗಿಡಗಳನ್ನು ಶಾಲೆಗೆ ತರಲು ತಿಳಿಸುವುದು. ನೆಟ್ಟಿರುವ ಗಿಡಮರಳು ರಕ್ಷಣೆ ಮಾಡಿಸುವುದು.
ಮರಗಳನ್ನು ಕಡೆಯ ದಂತೆ ಎಚ್ಚರಿಕೆ ಸಂದೇಶ ಕೊಡುವುದು. ಹೀಗೆ ಹಲವಾರು ರೀತಿಯ ಪರಿಸರ ಉಳಿಸಲು ನಮಗೆ ಎಷ್ಟು? ಸಾಧ್ಯವೋ ಅಷ್ಟು ರಕ್ಷಿಸಿದರೆ ನಮಗೆ ನಿಸರ್ಗ ದೇವತೆ ಖಂಡಿತ ರಕ್ಷಣೆ ಮಾಡುತ್ತಾಳೆ,ಅದಕ್ಕಾಗಿ ಇಂದಿನ ಪಣತೊಟ್ಟು ನಿಸರ್ಗ ಹಾಳು ಆಗದಂತೆ ಎಚ್ಚರವಹಿಸಿ ಘೋಷಣೆ ಹಾಕುತ್ತ ಮುಂದೆ ಬನ್ನಿ” ಮರವು ಉಳಿಸಿ,ಪರಿಸರ ಬೆಳೆಸಿ,” ಎಂದು ಕನ್ನಡ ನಾಡಿನಾದ್ಯಂತ ಘೋಷ ವಾಕ್ಯ ಕೂಗಲಿ ಎನ್ನುಷ್ಟರಲಿ…
ಮೇಷ್ಟ್ರು ಬಂದರೂ ಮಕ್ಕಳೆ ಹೊರಗಡೆ ಏನೋ ಶಬ್ದವು ಬರುತ್ತಿದ್ದೆ, ಅಂದಾಗ ಮಕ್ಕಳ ಎಲ್ಲವು ಜೋರಾಗಿ ಸರ್ ಮರವು ಉಳಿಸಿ ಪರಿಸರ ಬೆಳಸಿ ಎಂದು ಪರಿಸರ ರಕ್ಷಣೆ ಮಾಡುವರು ಬಂದಿದ್ದಾರೆ ಸರ್ ಹಾಗಾದರೆ ನಾವು ನೀವು ಕೂಡಿ ಪರಿಸರ ಜಾಗೃತಿ ಯಶಸ್ಸನ್ನು ಮಾಡೊಣ ಮಕ್ಕಳೆ.
ಆಗ ಎಲ್ಲಾ ಮಕ್ಕಳು ಜೋರಾಗಿ ಹೌದು ಸರ್ ಅಂದ್ರು.
-ಮಹಾಂತೇಶ ಎನ್ ಪಾಟೀಲ,
ಯುವ ಕವಿ,ಯಾತನೂರ
ಅಧ್ಯಕ್ಷರು ಕ ರಾ,ಬ,ಸಂಘ ಕಲಬುರಗಿ