ಯಾದಗಿರಿ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್,ಪಿ-ಎನ್,ಸಿ,ಡಿ ಕಾರ್ಯಕ್ರಮ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕಲಬುರ್ಗಿ ವಿಭಾಗ ಹಾಗೂ ಎಲ್ & ಟಿ ತಂತ್ರಜ್ಞಾನ ಸೇವೆಗಳು ರವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಮತ್ತು ಸ್ತನ ಕ್ಯಾನ್ಸರ್
ಅರಿವು ಕಾರ್ಯಕ್ರಮ ದಿನಾಂಕ: 16.11.2024 ರಂದು ಘೋಷಣೆ: ಮಧುಮೇಹ ಮತ್ತು ಯೋಗ ಕ್ಷೇಮ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ
ಡಾ|| ಎಮ್,ಎಸ್, ಪಾಟೀಲ್ ರವರು ಚಾಲನೆ ನೀಡಿದರು. ಜಿಲ್ಲೆಯಲ್ಲಿ 30 ವರ್ಷದ ಮೇಲ್ಪಟ್ಟು ಎಲ್ಲಾ
ಸಾರ್ವಜನಿಕರು ತಪಾಸಣೆ ಮಾಡಿಸಿಕೊಳ್ಳಲು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸೌಲಭ್ಯ ಇರುವ ಕುರಿತು
ತಿಳಿಸಿದರು. ಜೀವನ ಶೈಲಿ ಬದಲಾವಣೆ, ವ್ಯಾಯಾಮ ಮಾಡದೇ ಇರುವುದು, ತಂಬಾಕು ಹಾಗೂ ಸಾರಾಯಿ
ಸೇವನೆ, ಅಪೌಷ್ಠಿಕಾಂಶಯುಕ್ತ ಆಹಾರ ಸೇವನೆಗಳಿಂದ ಮಧುಮೇಹ ಬರಲು ಸಾಧ್ಯತೆ ಹೆಚ್ಚಿರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ. ಹಣಮಂತರೆಡ್ಡಿ ತಾಲೂಕು ಆರೋಗ್ಯ ಅಧಿಕಾರಿಗಳು
ಯಾದಗಿರಿ ರವರು ಮಾತನಾಡಿ ಮಧುಮೆಹ ಹೇಗೆ ಬರುವುದು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಹಾಗೂ ಚಿಕಿತ್ಸೆ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಯಾವೂದೇ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಬೇಗನೆ ತಪಾಸಣೆ ಮಾಡಿಸಿಕೊಂಡು ರೋಗ ಬರದಂತೆ ತಡೆಗಟ್ಟಲು ತಿಳಿಸಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕಲಬುರ್ಗಿ ವಿಭಾಗ ಹಾಗೂ ಎಲ್ & ಟಿ ತಂತ್ರಜ್ಞಾನ ಸೇವೆಗಳು, ವಿಭಾಗೀಯ ವ್ಯವಸ್ಥಾಪಕರು ಡಾ. ಗುರುರಾಜ ಕುಲಕರ್ಣಿ ರವರು ಕ್ಯಾನ್ಸರ್ ಎಂದರೆ ದೇಹದ ಒಂದು ಭಾಗದ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುವ ಒಂದು ರೋಗವಾಗಿದ್ದು, ಅದನ್ನು ಬೇಗನೆ ಪತ್ತೆ
ಹಚ್ಚುವುದರಿಂದ ಗುಣಮುಖರಾಗುತ್ತಾರೆಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಡಾ|| ಪದ್ಮಾನಂದ
ಗಾಯಕವಾಡ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಡಾ|| ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ|| ಜ್ಯೋತಿ ಕಟ್ಟಿಮನಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ|| ಮುಬಾಶೀರ್ ಅಹ್ಮದ್ ಸಾಜೀದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ|| ಸಂಜೀವ್ ಕುಮಾರ್ ರಾಯಚೂರ್‌ಕರ್, ಎನ್.ಸಿ.ಡಿ.
ಕೋಶದ ಡಾ|| ರಶೀದ್, ಶ್ರೀ ಯಾದವ್ ಕುಲಕರ್ಣಿ, ಡಾ|| ಗೋವಿಂದ, ಡಾ|| ಅರುಣ, ಆರ್.ಸಿ.ಹೆಚ್ ವಿಭಾಗದ ಶ್ರೀ ಮನೋಹರ ಪಾಟೀಲ್ ,ಶ್ರೀಮತಿ ಸಹನಾ, ಶ್ರೀ ವಿಜಯ ಕುಮಾರ, ಶ್ರೀ ವೆಂಕಟೇಶ
ಜಿ, ಮತ್ತು ಈಶಪ್ಪ ತಂ ಕಾಳಪ್ಪ ವಿಶ್ವಕರ್ಮ, ಎನ್.ಸಿ.ಡಿ ಎಲ್ಲಾ ಕಾರ್ಯಕ್ರಮಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮತ್ತು ನಗರ ಆರೋಗ್ಯ ಕೇಂದ್ರದ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.