ಶ್ರೀ ಕೋರಿಸಿದ್ದೇಶ್ವರ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡುವ ಮೂಲಕ ಸ್ನೇಹಾ ಎಮ್. ಬಿ ಹಡಪದ ಜನ್ಮ ದಿನ ಆಚರಣೆ.
ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ಕುಮಾರಿ ಸ್ನೇಹಾ ಎಮ್ ಹಡಪದ ಸುಗೂರ ಎನ್ ಅವರ 7ನೇ ವರ್ಷದ ಜನ್ಮದಿನದ ಪ್ರಯುಕ್ತ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಇರುವ ಶ್ರೀ ಕೋರಿಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ಪೆನ್ನು ವಿತರಣೆ ಮತ್ತು ಶಿಕ್ಷಕರಿಗೆ ಸಹ ಪೆನ್ನು ನೀಡಿ ಆಶೀರ್ವಾದ ಪಡೆದ ಸ್ನೇಹಾ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ಮಗಳು ಕುಮಾರಿ ಸ್ನೇಹಾ ಹುಟ್ಟು ಹಬ್ಬವನ್ನು ಶ್ರೀ ಕೋರಿಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ನೇಹಾ ಮಗಳ ಜನ್ಮ ದಿನವನ್ನು ಮಕ್ಕಳ ಜೊತೆಗೆ ಆಚರಿಸುವ ಮೂಲಕ ಮತ್ತು ಶಿಕ್ಷಕರ ಜೊತೆಯಲ್ಲಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ಶಾಲೆಯಲ್ಲಿ ಆಚರಣೆ ಮಾಡಿಕೊಂಡಳು. ಶಿಕ್ಷಕ (ಗುರುಗಳ) ಆಶೀರ್ವಾದ ಪಡೆದಳು. ಉತ್ತಮ ಶಿಕ್ಷಣ ನೀಡಿ ಮಕ್ಕಳ ಸೇವೆ ಮಾಡುತ್ತಿರುವ ಶಿಕ್ಷಕರಿಗೆ ಜನ್ಮ ದಿನದಂದು ಪೆನ್ನುಗಳು ನೀಡಿ ಗೌರವ ಅರ್ಪಿಸಿದಳು. ಶಾಲಾ ಮಕ್ಕಳಿಗೆ ಸ್ವೀಟ್ ಹಾಗೂ ನೋಟ್ ಬುಕ್ ಪೆನ್ನು ವಿತರಣೆ ಮಾಡಿ ಯಾವುದೇ ತರಹದ ದುಂದು ವೆಚ್ಚ ಮಾಡದೆ ಈಗಿನ ಯುವ ಜನತೆ ಒಂದು ಉತ್ತಮ ಸಂದೇಶ ಸಾರುವ ಮೂಲಕ ವಿಶೇಷವಾಗಿ ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಈ ವೇಳೆಯಲ್ಲಿ ಶ್ರೀ ಕೋರಿಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶಾಂತಿನಾಥ ಹಿರೇಗೌಡ್ರು ಕೊಲ್ಲೂರು ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಮಲ್ಹಾರ್, ಹಿರಿಯ ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ ದಂಡಗಿ ಕೊಲ್ಲೂರು, ಜೈಯಸಿಂಗ್ ಜಾಧವ್ ಶಿಕ್ಷಕರು, ತಿಮ್ಮಣ್ಣ ಶಿಕ್ಷಕರು ,ರವಿ ರಾಠೋಡ ಶಿಕ್ಷಕರು ,ದೇವಪ್ಪ ಘಟ್ಲಿ ಬಾಡಿಯಾಲ್ ಶಿಕ್ಷಕರು ಹಾಗೂ ಶಿಕ್ಷಕಿಯರಾದ ಪುಷ್ಪ ಟೀಚರ್, ಸವಿತಾ ಟೀಚರ್, ಜ್ಯೋತಿ ಟೀಚರ್, ಇಂದು ಟೀಚರ್, ಹಾಗೂ ಶಾಲಾ ಮಕ್ಕಳು ಮತ್ತು ವಿಶ್ವನಾಥ ಬಿ ಹಡಪದ ಸುಗೂರ ಎನ್. ಮತ್ತು ಶ್ರೀಶೈಲ್ ಕಟ್ಟಿಸಂಗಾವಿ ಸೇರಿದಂತೆ ಹಲವರು ಸ್ನೇಹಾ ಜನ್ಮ ದಿನಾಚರಣೆಯಲ್ಲಿ ನೋಟ್ ಬುಕ್ ಪೆನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.