ಬೆಂಗಳೂರು:
ಸಹಕಾರ ಕ್ಷೇತ್ರ ಸೇರಿದಂತೆ ಸಾಮಾಜಿಕ ಬದ್ಧತೆಯಲ್ಲಿ ತೊಡಗಿಸಿಕೊಂಡು ಸತತವಾಗಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಹಾಗೂ ಕರ್ನಾಟಕ ಸರ್ಕಾರ ಸಚಿವರಾಗಿ ಜನನುರಾಗಿ ದುಡಿದ ಶಾಸಕ ಆರಗ ಜಾನೇಂದ್ರ ಅವರಿಗೆ ವಿಶ್ವವಾಣಿ ಪತ್ರಿಕೆ ಹಾಗೂ ಜಪಾನ್ ಹಿರಿಯ ರಾಯಭಾರಿಗಳ ಸಮ್ಮುಖದಲ್ಲಿ ಈ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.
ನ. 22 ರಂದು ಟೋಕಿಯೋ ನಗರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರಗ ಜಾನೇಂದ್ರಅವರಿಗೆ ಜಪಾನ ದೇಶದ ರಾಯಭಾರಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸಾಮಾಜಿಕ ಬದ್ಧತೆ ಹಾಗೂ ಕ್ರಿಯಾಶೀಲತೆಗೆ ಹೆಚ್ಚಿನ ಆದ್ಯತೆ ನೀಡಿದ ಶಾಸಕ ಆರಗ ಜಾನೇಂದ್ರ ಅವರನ್ನು ವಿಶ್ವ ವಾಣಿ ಪತ್ರಿಕೆಯ ಪ್ರಧಾನ ಸಂಪಾದಕರು ಅದ ವಿಶೇಶ್ವರ ಭಟ್ ಅವರ ನೇತೃತ್ವದ ಸಮಿತಿ ಶಾಸಕ ಆರಗ ಜಾನೇಂದ್ರ ಅವರನ್ನು ಗುರುತಿಸಿ ಈ ಅಂತರ ರಾಷ್ಟೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಐದು ದಿನಗಳ ಕಾಲ ಟೂಕಿಯೋದಲ್ಲಿ ನಡೆಯುವ ಈ ಕಾರ್ಯಕ್ರಮ ವನ್ನು ಜಪಾನ ದೇಶದ ಸರಕಾರದ ಸಹಯೋಗದಲ್ಲಿ ವಿಶ್ವವಾಣಿ ದಿನಪತ್ರಿಕೆ ಆಯೋಜನೆ ಮಾಡಿದೆ.
ವಿಶ್ವವಾಣಿ ಆಯೋಜನೆ ಮಾಡುತ್ತಿರುವ ಈ ಅಂತರ್ ರಾಷ್ಟೀಯ ಪ್ರಶಸ್ತಿಗೆ ಭಜನಾ ರಾಧವಾರಲ್ಲಿ ಶಾಸಕ ಆರಗ ಜಾನೇಂದ್ರ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.