ಹಳ್ಳಿ ಮನೆಯಲ್ಲಿ ಧನ್ವಂತರಿ ಹೋಮ, ಕಾಕತಾಳೀಯ ವಾಗಿ ಹೋಮದ ಕುಂಡ ನಿರ್ಮಿಸಿದ ಸರೀ ಮೇಲೆ ಶೀಟ್ ನ ಬೀಮ್ ಗೆ ಸೀಲಿಂಗ್ ಪ್ಯಾನ್ ಹಲವಾರು ವರ್ಷಗಳಿಂದ ಇದೆ.
ಎರಡೂವರೆ ಗಂಟೆ ಜರುಗಿದ ಹೋಮದಲ್ಲಿ ಹೊಗೆ, ಆಹುತಿ ಹಾಕುತ್ತಿದ್ದಂತೆ ಜಾಸ್ತಿ ಆಗುತ್ತಾ ಹೋಯಿತು. ಪೂರ್ಣಾಹುತಿ ಹೊತ್ತಿಗೆ ಧಗ- ಧಗ ಬೆಂಕಿಯಿಂದ ತುಂಬಾ ಹೊಗೆ ಹೊರ ಹೊಮ್ಮತ್ತದೆ. ನೋಡ ನೋಡುತ್ತಾ ಪ್ಯಾನ್ ಸುತ್ತಲು ಆರಂಭಿಸುತ್ತದೆ.
ಆ ಮನೆಯಲ್ಲಿ ಹೆಚ್ಚಾಗಿ ಹೋಮ ನಡೆಯುತ್ತಾ ಇರುತ್ತದೆ, ಮನೆಯವರ ಗಮನ ಸೆಳೆದಾಗ, ಹಾಂ ಹೊಗೆಯ ಪ್ರಭಾವದಿಂದ ಪ್ಯಾನ್ ತಿರುಗುತ್ತಿದೆಂದು ಪ್ರಾಮಾಣಿಕವಾಗಿ ಹೇಳಿದರು.
ವಿಷಯವೇನೆಂದರೆ ಹೋಮದಲ್ಲಿ ಶಕ್ತಿಯಿದೆ ಎಂಬುದಕ್ಕೆ ಇನ್ನಾವ ಪ್ರಯೋಗ, ನಿದರ್ಶನ ಬೇಕಾಗಿಲ್ಲ, ಕಣ್ಣಾರೆ ಶಕ್ತಿಯ ಭಾಸವಾಯಿತು.
ಧನ್ವಂತರಿಯ ಪೂರ್ಣಾನುಗ್ರಹ ಆಯಿತು.
ನಮ್ಮ ಪೂರ್ವಜರು ಮಹಾನರು, ನಮಗೆ ಬೆಲೆ ಕಟ್ಟಲಾಗದ ಸಂಸ್ಕೃತಿಯನ್ನು ಕೊಟ್ಟು ಹೋಗಿದ್ದಾರೆ, ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.
ಲೇಖನ : ಚಂದ್ರಶೇಖರ ಹೆಬ್ಬಾರ್ ಕೊಲ್ಯ