ಬೀದರ್ ಜಿಲ್ಲೆಯ ಹುಮನಾಬಾದ್ ನಗರದ ಹೊರವಲಯದಲ್ಲಿರುವಂತಹ ಆರ್ಬಿಟ್ ಸಂಸ್ಥೆ ಸಭಾಂಗಣದಲ್ಲಿ ಆರ್ಬಿಟ್ ಸಂಸ್ಥೆ ಮತ್ತು ಎಪಿಡಿ ಸಂಸ್ಥೆಯ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣದ ಕಾರ್ಯಕ್ರಮದ ಅಡಿಯಲ್ಲಿ ಬೆಳವಣಿಗೆ ಕುಂಠಿತ ಮಕ್ಕಳ ಪೋಷಕರ ಬಲವರ್ಧನೆ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆ ಸುಮಾರು 30 ವರ್ಷ ಸಮಾಜ ಸೇವೆ ಮಾಡುತ್ತಿದ್ದು, ಬೆಳವಣಿಗೆ ಕುಂಠಿತ ,ಮಕ್ಕಳಿಗೆ ವಿಶೇಷವಾದ ಆರೈಕೆ ಅವಶ್ಯಕತೆ ಇದೆ, ಪೋಷಕರು ಇಂತಹ ಮಕ್ಕಳಿಗೆ ಪ್ರೀತಿ ,ವಾತ್ಸಲ್ಯ ಮತ್ತು ಅವಕಾಶಗಳನ್ನು ನೀಡುವುದರಿಂದ ಮಗುವಿನ ಜೀವನ ಉತ್ತಮಗೊಳಿಸಲು ಸಹಾಯವಾಗುತ್ತದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಧನಂಜಯ್ ರವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಕುಟುಂಬ ಸದಸ್ಯರ ಬೆಳವಣಿಗೆ ಕುಂಠಿತ ಮಕ್ಕಳನ್ನು ಒಳ್ಳೆಯ ವಾತಾವರಣ ಕಲ್ಪಿಸುವುದರಿಂದ ಮಗುವಿನಲ್ಲಿ ಬದಲಾವಣೆ ಕಾಣಬಹುದು ಅದರ ಜೊತೆಗೆ ಕುಟುಂಬದಲ್ಲಿ ಅವಕಾಶಗಳನ್ನು ನೀಡಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಒಟ್ಟು 30 ಜನ ಇದರ ಉಪಯೋಗ ಪಡೆದುಕೊಂಡಿದ್ದರು.
ಪ್ರಾರ್ಥನೆ ಮಮತಾ ಮತ್ತು ಕವಿತಾ,
ಸ್ವಾಗತ ಮಮತಾ ,
ವಂದನಾರ್ಪಣೆ ಶ್ರೀ ಸದಾನಂದ,
ನಿರೂಪಣೆ ಸೂರ್ಯಕಾಂತ್ ವಹಿಸಿಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.