ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಾಲಕರು ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮುಡಿಸಬೇಕು: ವೀರೇಶ ಶಾಸ್ತ್ರಿಗಳು

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯ ವಿಜಯ ಮಹಾಂತೇಶ್ವರ ಮೂಲಮಠದ ಪರಮತಪಸ್ವಿ ಲಿಂ. ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ೧೩೩ ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಥತಿ ಮಹೋತ್ಸವದ ಅಂಗವಾಗಿ ಚಿತ್ತರಗಿ ಮಠದಲ್ಲಿ ಗ್ರಾಮದ ಅಕ್ಕನ ಬಳಗದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ 8ನೇ ತರಗತಿಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಗುರುಮಹಾಂತ ಶ್ರೀಗಳು ವಹಿಸಿದರು, ಮುಖ್ಯ ಅತಿಥಿಗಳಾಗಿ ಪ್ರವಚನಕಾರರಾದ ವಿರೇಶಶಾಸ್ತ್ರಿಗಳು ವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೊತೆ ಜೊತೆಗೆ ಮನೋವಿಕಾಸ, ಭೌತಿಕ ವಿಕಾಸಗಳು ತುಂಬುವದರೊ0ದಿಗೆ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾತ್ರ ಮಕ್ಕಳು ಪ್ರಭುದ್ಧತೆಗೆ ಬರಲು ಸಾಧ್ಯವಾಗುತ್ತದೆ ಕಾರಣ ಮಕ್ಕಳನ್ನು ಆಚಾರ, ವಿಚಾರವಂತರನ್ನಾಗಿಸಲು ಪಾಲಕರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕಾ ಬೇವೂರ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರೇಣುಕಾ ಮಾಚಾ ಕಾರ್ಯದರ್ಶಿ ವೆಂಕಮ್ಮ ಬೇವೂರ, ಖಚಾಂಚಿ ಈರಮ್ಮ ಕಲಾದಗಿಮಠ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಬಗ್ಗೆ ಮಕ್ಕಳಿಗೆ ಗೌರಮ್ಮ ನಾಲತವಾಡ ,ರಕ್ಷಿತಾ ಮಳೆಣ್ಣವರ ಭಾಗ್ಯ ನಾಗರಡ್ಡಿ, ರತ್ನಾ ಪಾಟೀಲ,ಇವರುಗಳು ಚೈತನ್ಯ ತುಂಬಿದರು. ಸವಿತಾ ಸುಧೀರ ಪಾಟೀಲ ಸ್ವಾಗತಿಸಿದರು ವಂದಿಸಿದರು. ಪ್ರಕೃತಿ ಹನಮಂತ ಪಾಟೀಲ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಿಸಿದರು.
ವೈಶಾಲಿ ಮಹೇಶ ಬೇವೂರ ನಿರೂಪಿಸಿದರು.

ಪ್ರೇಕ್ಷಕರ ಮನ ಗೆದ್ದ ಹಾಡುಗಳು:
ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿತ್ತರಗಿ ಗ್ರಾಮದ ವಿವಿಧ ಶಾಲೆಗಳ ಮಕ್ಕಳು ಜಾನಪದ, ಧಾರ್ಮಿಕ, ವಚನಗಳು, ಹಾಡುಗಳಾದ ಮಹಾಂತ ಜೋಳಿಗೆ (ಧಾರ್ಮಿಕ) ಉಘೇ ಉಘೇ ಮಹಾದೇವ, ವಿಜಯ ಮಹಾಂತನ ವಿಮಲ ಪಾದಕೆ ಧಾರ್ಮಿಕ ಗೀತೆ, ಭಾಗ್ಯದ ಬಳೆಗಾರ, ಹಸಿರು ಕಡ್ಡಿಯ ಸೀರೆ (ಜಾನಪದ) ಧರ್ಮವ ಬೆಳಗಿದೆ ಅಣ್ಣಾ ಬಸವಣ್ಣ (ಭಕ್ತಿಗೀತೆ ಜಾನಪದ) ಏನು ಕೊಡ ಏನು ಕೊಡಾವ ಹುಬ್ಬಳ್ಳಿ ಮಾಟದೆಂತಾ ಚಂದುಳ್ಳಿ ಕೊಡವಾ, ಚಲುವಯ್ಯ ಚಲ್ಲಿದರ ಮಲ್ಲಿಗೆಯ ಬಾಣ ಸುರೇರಿ ಮ್ಯಾಲೆ ಇನ್ನೂ ಇತರ ಹಾಡುವುದರ ಮೂಲಕ ಜನಮನ ರಂಜಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ