ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಐಶ್ವರ್ಯ ಸರಪಳಿ ಗುಂಡು ಎಸೆತದ ಸ್ಪರ್ಧೆಯಲ್ಲಿ ೨೫.೨೩ಮೀಟರ್ ದೂರ ಎಸೆದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ದಿನಾಂಕ ೨೦/೧೧/೨೦೨೪ ರಿಂದ ೨೨/೧೧/೨೦೨೪ರವರೆಗೆ ನಡೆದ ೧೮ನೇ ಅಂತರ್ ಕಾಲೇಜು ಅಥಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೊಸದಾಗಿ ದಾಖಲೆಯನ್ನು ನಿರ್ಮಿಸಿದ್ದಾಳೆ.
೨೦೨೩-೨೪ನೇ ಸಾಲಿನಲ್ಲಿ ೨೦.೬೩ಮೀಟರ್ ಎಸೆದು ತಾನೇ ನಿರ್ಮಿಸಿದ್ದ ವಿಶ್ವವಿದ್ಯಾಲಯದ ದಾಖಲೆಯನ್ನು ಮುರಿದು, ೨೦೨೪-೨೫ನೇ ಸಾಲಿನಲ್ಲಿ ೨೫.೨೩ಮೀಟರ್ ದೂರ ಸರಪಳಿ ಗುಂಡು ಎಸೆದು ಹೊಸದಾಗಿ ದಾಖಲೆಯನ್ನು ನಿರ್ಮಿಸಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಯನ್ನು ಮೆಚ್ಚಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಯಲದ ಕುಲಪತಿಗಳಾದ ಶ್ರೀಮತಿ ತುಳಸಿಮಾಲಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶನಾಲಯವು ಇವರಿಗೆ ೫೦೦೦ ರೂಪಾಯಿಗಳ ಪ್ರೋತ್ಸಾಹ ಧನವನ್ನು ಹಾಗೂ ಪ್ರಶಸ್ತಿ ಪಾರಿತೋಷಕವನ್ನು ನೀಡಿ ಗೌರವಿಸಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ ನಮ್ಮ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಕು.ಅಕ್ಷತಾ ರೆಡ್ಡಿ ಇವರೂ ಕೂಡಾ ಸರಪಳಿ ಗುಂಡು ಎಸೆತದಲ್ಲಿ ೧೯.೨೯ ಮೀಟರ್ ಎಸೆದು ದ್ವಿತೀಯ ಸ್ಥಾನವನ್ನು ಹಾಗೂ ಕು.ದೇವಮ್ಮ ಇವರು ೧೦,೦೦೦ ಮೀಟರ್ ಓಟವನ್ನು ೫೩ ನಿಮಿಷಗಳಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ ಲಮಾಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರದೀಪ್ ಕುಮಾರ್ ಯು ಹಾಗೂ ಕಾಲೇಜಿನ ಸಮಸ್ತ ಭೋಧಕ, ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಶುಭ ಕೋರಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.