ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣಕ್ಕೆ ಆಗಮಿಸಿದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಕೆಇಬಿ ಕಚೇರಿಯಿಂದ ಲೋಕೋಪಯೋಗಿ ಇಲಾಖೆ ವಸತಿ ಗೃಹದವರೆಗೊ ಗೌರವಯುತವಾಗಿ ತಾಲೂಕು ನಾಯಕ ಸಂಘದಿಂದ ಸ್ವಾಗತಿಸಿದರು.
ರಾಜಕೀಯ ಸಂದರ್ಭದಲ್ಲಿ ರಾಜಕಾರಣ ಮಾಡಿ ರಾಜಕೀಯ ಮುಗಿದ ನಂತರ ಪಕ್ಷ ಭೇದ ಮರೆತು ನೀವೆಲ್ಲರೂ ಅಣ್ಣ ತಮ್ಮಂದಿರಾಗಿ ನಮ್ಮ ನಾಯಕ ಸಮುದಾಯದ ಮುಖಂಡರುಗಳು ಸಮುದಾಯದ ಪರವಾಗಿ ಸಂಘಟಿತರಾಗಬೇಕು ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಶ್ರೀಮಠದ 27 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿಯವರ 18ನೇ ವರ್ಷದ ಪುಣ್ಯಾರಾಧನೆ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಜಾತ್ರೆಗೆ ಹನೂರು ತಾಲ್ಲೂಕು ನಾಯಕ ಸಮುದಾಯದ ಮುಖಂಡರುಗಳಿಗೆ ಜಾತ್ರೆಗೆ ಆಹ್ವಾನ ನೀಡಿ ನಂತರ ಮಾತನಾಡಿದರು.
ಫೆಬ್ರವರಿ ತಿಂಗಳ ಮೊದಲನೇ ವಾರದ ೫, ೯ ರಂದು ದಾವರಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನ ಹಳ್ಳಿಯಲ್ಲಿ ನಡೆಯುವ ಜಾತ್ರೆಗೆ ಪಕ್ಷ ಭೇದಗಳನ್ನು ಬದಿ ಗೊತ್ತಿ ಎಲ್ಲರೂ ಗ್ರಾಮದ ಪ್ರತಿ ಹಳ್ಳಿಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಎಲ್ಲರನ್ನೂ ಕರೆತನ್ನಿ, ಜಾತ್ರೆಗೆ ಬರುವಂತಹ ಜನರಿಗೆ ಊಟ ಹಾಗೂ ವಸತಿ ಹಾಗೂ ಮೂಲಸೌಕರ್ಯ ಇರುತ್ತದೆ ಎಂದರು.
ರಾಜ್ಯದ ನಾಯಕ ಸಮುದಾಯ ಕರ್ನಾಟಕ ಸರ್ಕಾರ ವಾಲ್ಮೀಕಿ ಜಯಂತಿಗೆ ರಜೆಯನ್ನು ಘೋಷಣೆ ಮಾಡಿದೆ ಎಂದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ ಹನೂರು ತಾಲೂಕಿನಲ್ಲಿ ಶ್ರೀ ವಾಲ್ಮೀಕಿ
ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿರುವುದು ಬಹಳ ಸಂತಸವಾಗಿದೆ ಮುಖಂಡರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಚಾಮರಾಜನಗರ ಕೇಂದ್ರ ಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಭಗೀರಥ, ಕನಕದಾಸ ಅವರ ಪ್ರತಿಮೆಗಳನ್ನು ಭೂಮಿ ಪೂಜೆ ನೆರವೇರಿಸಲು ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಪುಟ್ಟವೀರ ನಾಯಕ, ಕೊಪ್ಪಾಳಿ ಮಹಾದೇವ ನಾಯಕ, ಗೌರವ ಅಧ್ಯಕ್ಷ ಎಚ್ ಕೆ ಶಿವಣ್ಣ, ಉಪಾಧ್ಯಕ್ಷರಾದ ವೆಂಕಟಾಚಲ (ತಿರುಪತಿ) ಖಜಾಂಚಿ ಮಲ್ಲೇಶ್, ಕಾರ್ಯದರ್ಶಿ ಚಂಗವಾಡಿ ರಾಚಪ್ಪ, ಬಾಲುನಾಯಕ, ದೊಡ್ಡಿಸಿಗಾ ನಾಯಕ, ರಾಚಪ್ಪ ಜಗದೀಶ್, ನಂಜಪ್ಪ, ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್