ಬೆಂಗಳೂರು : ಮಾತಿನ ಮನೆಯಲ್ಲಿ ನಿನ್ನೆ (30/11/2024) ರಂದು ವಿದ್ವಾನ್ ಮ್ಯಾಂಡೋಲಿನ್ ಕಾರ್ತಿಕ್ ಅವರಿಂದ ಸುಮಧುರ ಗೀತೆಗಳ ವಾದನ ಕಾರ್ಯಕ್ರಮವಿತ್ತು. ಪ್ರಶಾಂತ್ ಅವರ ತಬಲಾ ವಾದನದೊಂದಿಗೆ ಸುಮಧುರ ಗೀತೆಗಳ ವಾದನ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ವಿದ್ವಾನ್ ಕಾರ್ತಿಕ್ ಹಾಗೂ ಪ್ರಶಾಂತ್ ಅವರನ್ನು ಮಾತಿನ ಮನೆಯ ಪರವಾಗಿ ರಾ ಸು ವೆಂಕಟೇಶ ಮತ್ತು NAL ಸತ್ಯಪ್ರಸಾದ್ ಗೌರವಿಸಿದರು. ರಾಧಾ ಕೇಶವ್ ಹೆಬ್ಬಾರ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
