ವಿಜಯಪುರ : ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿಯಲ್ಲಿ ಶುಶ್ರೂಷಕರಾಗಿ ಕಾರ್ಯ ನಿರ್ವಹಸುತ್ತಿರುವ ನಗರದ ಸಾಹಿತಿ ಪ್ರಕಾಶ ಜಹಾಗೀರದಾರ ಇವರಿಗೆ ಮಂಗಳೂರಿನ ಸಾಹಿತ್ಯ ಚಿಗುರು ಬಳಗ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಲಭಿಸಿದೆ. ವಿಜೇತರಾದ ಪ್ರಕಾಶರವರಿಗೆ ಶೀಘ್ರದಲ್ಲೇ ಬೆಳ್ಳಿ ನಾಣ್ಯ ಮತ್ತು ಪ್ರಶಂಸನಾ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರಾದ, ಸಾಹಿತ್ಯ ಚಿಗುರು ಬಳಗದ ನಿಯಾಝ್ ಪಡೀಲು ಮತ್ತು ಎಮ್.ಡಿ.ಮಂಚಿಯವರು ತಿಳಿಸಿದ್ದಾರೆ.
ಬೆಳ್ಳಿನಾಣ್ಯ ವಿಜೇತರಾದ ಪ್ರಕಾಶ ರವರಿಗೆ ಶ್ರೀಮತಿ ಎಲ್. ಎಸ್.ಕುಲಕರ್ಣಿ.ಚಂದ್ರಕಲಾ ಇಟಗಿಮಠ ಹಾಗೂ ನಿಡಗುಂದಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ.ಗೋಡಖಂಡ್ಕಿ.ಡಾ.ಸತೀಶ ಮದಭಾವಿ,ಡಾ ರವೀಂದ್ರ ಭಜಂತ್ರಿ,ಡಾ ಮಲ್ಲಮ್ಮ ರೆಡ್ಡಿ ಅವರೊಂದಿಗೆ ಬಸವರಾಜ ಹೊಸಮನಿ, ಕಾಶೀಮ ಸಂಗಾಪುರ, ಬಸವರಾಜ ಹಾವೇರಿ, ಶೇಖರ್.ಎಮ್.ಗಿರೀಶ ದೊಡ್ಡಿ ಹಾಳ, ಗಿರೀಶ್ ಹೂಗಾರ ಸಂತೋಷ ಗಿರಣಿ, ಮಹಾಂತೇಶ ವಾಲೀಕಾರ ಮತ್ತು ಡಾ.ನವೀನ್ ಕಮತರವರು ಅಭಿನಂದಿಸಿದ್ದಾರೆ.
