ಬೀದರ್/ಚಿಟಗುಪ್ಪ : ಮಾನವೀಯತೆಯ ಹರಿಕಾರ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಸಮತಾವಾದಿ,ದಯವೇ ಧರ್ಮದ ಮೂಲವೆಂದು ಸಾರಿದ ಮಾಹಾನಸಂತ, ಕಾಯಕವೇ ಕೈಲಾಸವೆಂದು ಸಾರಿದ ಶ್ರೇಷ್ಠ ಯುಗ ಪುರುಷ ವಿಶ್ವಗುರು ಬಸವಣ್ಣನವರ ಕುರಿತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿದ್ದು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಾಹಿತಿ, ಬಸವ ತತ್ವ ಪ್ರಚಾರಕ, ಹೋರಾಟಗಾರ ಸಂಗಮೇಶ ಎನ್ ಜವಾದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ವಕ್ಕೆ ಸಮಾನತೆ ಸಾರಿದ, ಭಾವೈಕ್ಯತೆಯ ಸಂತ ಅಣ್ಣ ಬಸವಣ್ಣನವರು ಇಂತಹ ಜಾಗತಿಕ ಪ್ರವಾದಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಬಸವಣ್ಣನವರ ಆದಿಯಾಗಿ ಇಡೀ ಶರಣರ ಸಂಕುಲಕ್ಕೆ ಮಾಡಿರುವ ಬಹುದೊಡ್ಡ ಅಪಮಾನವಾಗಿದೆ.
ಈ ಕೂಡಲೇ ಇವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಮಸ್ತ ಬಸವಾಭಿಮಾನಿಗಳು ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಂಗಮೇಶ ಎನ್ ಜವಾದಿ ಎಚ್ಚರಿಕೆ ನೀಡಿದ್ದಾರೆ.
