ಧಾರವಾಡ ಜಿಲ್ಲಾ ಮರ್ರೇವಾಡದಲ್ಲಿ ನಡೆಯುತ್ತಿರುವ ದಾರು (ಮದ್ಯಪಾನ) ದರ್ಬಾರ್ ಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗೆ ರಾಜಾ ರೋಷವಾಗಿ ಮಾರುತ್ತಿದ್ದಾನೆ. ಅಷ್ಟಕ್ಕಾದರೂ ಈತನ ಹಿಂದೆ ಇರುವ ಕಾಣದ ಕೈಗಳಾದರೂ ಯಾರದು….?
ಈತನ ಕಣ್ಣಾಮುಚ್ಚಾಲೆ ಆಟ ಕಂಡು ಕಾಣದಂತೆ ಕುಳಿತ ಅಧಿಕಾರಿಗಳು ಹೊರಗಿನಿಂದ ನೋಡಲು ಮಾತ್ರ ಈತನದ್ದು ಗೂಡಂಗಡಿ ಒಳಗಡೆ ಮಾತ್ರ ಪರವಾನಗಿ ಇಲ್ಲದ ಬಾರ್ ಅಂಡ್ ರೆಸ್ಟೋರೆಂಟ್ ಎಂದರೆ ತಪ್ಪಾಗಲಾರದು.
ಮರೇವಾಡದ ಪ್ರತಿಷ್ಠಿತ ಹತ್ತಿ ಜಿನ್ನಿನ ಪ್ಯಾಕ್ಟರಿ ಮುಂದೆ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಾದರೂ ಯಾಕೆ….?
ಇಲ್ಲಿಯ ಜನರು ದಾರು ಕುಡಿದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿರುವನಂತಹ ಅನೇಕ ಉದಾಹರಣೆಗಳಿದ್ದರೂ ಸಹ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಡೆ ಯಾವ ಕಡೆ ಎಂಬುದೇ ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಇಷ್ಟಾದರೂ ಯಾವ ಅಧಿಕಾರಿಗೂ ಕ್ಯಾರೆ ಎನ್ನದ ಪುಂಡನೀತ,
ವಯಸ್ಸಾದ ತಂದೆ ಹಾಲುಣಿಸಿದ ತಾಯಿಯನ್ನೇ ದಾರು ಮಾರಲು ಹಚ್ಚಿದ ಭೂಪನಿವನು.
ಇನ್ಮುಂದೆಯಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನೀವು ಈತನು ಕೊಡುವ ಲಂಚಕ್ಕೆ ಬಲಿಯಾಗಿರಬಹುದೆಂಬ ಅನುಮಾನಕ್ಕೆ ಎಡೆ ಮಾಡಿ ಕೊಡುವುದಂತೂ ಖಚಿತ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
-ಕರುನಾಡ ಕಂದ
