ಮಧುರ ಭಾವ ಮನದಿ ಮೂಡಿ
ಸಾವಿರ ಕಲ್ಪನೆ ಮೋಡಿ ಮಾಡಿ
ತುಡಿತ ಮಿಡಿತ ವಿರಹವು ಕಾಡಿ
ಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ.
ಭಾವನೆಯ ಶೃತಿ ತಾಳ ತಪ್ಪಿದೆ
ಸುಂದರ ಆಸೆ ಮನ ತಲುಪಿದೆ
ಎದೆಯಂಗಳ ತಣಿದು ತಂಪಿದೆ
ಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.
ಅಧರದಿ ನಗುವು ಅರಳಿ ನಿಂತಿದೆ
ಮೊಗದ ತುಂಬ ಮಧುವು ಚೆಲ್ಲಿದೆ
ಅನುರಾಗದ ಸ್ಪರ್ಶಬಯಕೆ ಎದ್ದಿದೆ
ನಲ್ಲನ ಆಸರೆಯ ಒಲವ ಬಯಸಿದೆ.
ಪ್ರೀತಿಯ ಕಂಪು ಅರಳಿ ಘಮ್ಮನೆ
ಹರಡಿ ನಿಂತಿದೆ ಗಂಧದ ಸುವಾಸನೆ
ಕೊಡದೆ ಸುಳ್ಳು ಪೊಳ್ಳಿನ ಆಶ್ವಾಸನೆ
ಬಂದು ಹೃದಯವ ಸೇರು ಬೇಗನೆ.
✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
