ಶಿವಮೊಗ್ಗ: ತಾಲೂಕಿನ ಕೋಟೆಗಂಗೂರು ಬಳಿ ಇರುವ ಮಾನಸ ಇಂಟರ್ನ್ಯಾಷನಲ್ ಐಸಿಎಸ್ ಇ ಶಾಲೆಯಲ್ಲಿ ಆಯೋಜಿಸಿದ್ದ 6ನೇ ವರ್ಷದ ಚಿತ್ರಕಲಾ ಸ್ಪರ್ಧೆ ಭಾನುವಾರ ಯಶಸ್ವಿಯಾಗಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯಿಂದ ಆಯೋಜಿಸಿದ್ದ 6 ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಫರ್ಧೆಗೆ ಶಾಲೆಯ ಕಾರ್ಯದರ್ಶಿ ಎಸ್. ಜನಾರ್ಧನ್ ಚಾಲನೆ ನೀಡಿದರು.
7 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಾತ್ರವಲ್ಲದೇ ನೆರೆಯ ಹೊನ್ನಾಳಿ ತಾಲೂಕಿನಿಂದಲೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಏಳು ವಿಭಾಗದಲ್ಲೂ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು. ಅದೇ ರೀತಿ ಭಾಗವಹಿಸಿದ ಪ್ರತಿ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಜಿಲ್ಲೆಯ ಚಿತ್ರಕಲಾ ಶಿಕ್ಷಕರಾದ ಆಶೋಕ್ ವಾಲಿಕರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸೌಮ್ಯ ಕೆ.ವಿ, ನಿರ್ವಾಹಕರಾದ ತಾರಾ ಪ್ರಕಾಶ್ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
