ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಅಧೀನದಲ್ಲಿ ಬರುವ ಎಲ್ಲಾ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸುಮಾರು 6 ತಿಂಗಳಿಂದ ವೇತನವನ್ನೇ ನೀಡಿಲ್ಲ. ಅತಿಥಿ ಶಿಕ್ಷಕರ ಗೋಳು ಕೇಳುವವರು ಯಾರು?
ಸರ್ಕಾರದ ಆದೇಶದಂತೆ ಅಕ್ಟೋಬರ್ ತಿಂಗಳಲ್ಲಿ ಮೂರು ತಿಂಗಳು ವೇತನ ನೀಡುವಂತೆ ಸರಕಾರದ ಆದೇಶ ಮತ್ತು ಅನುದಾನ ಬಿಡುಗಡೆ ಮಾಡಿದರು ಸಿಂದಗಿ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಯಾದ ಯಡ್ರಾಮಿಯವರು ಸರಕಾರದ ಆದೇಶವನ್ನು ನಿರ್ಲಕ್ಷ ಮಾಡಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಜೋತೆಗೆ ಆಟ ಆಡುತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ವೇತನವನ್ನು ನೀಡಿದ್ದಾರೆ.

ಆದರೆ ಸಿಂದಗಿ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಯಾದ ಯಡ್ರಾಮಿಯವರು ಅತಿಥಿ ಶಿಕ್ಷಕರಿಗೆ ವೇತನವನ್ನು ನೀಡುತ್ತಿಲ್ಲ. ಅದನ್ನು ಕೇಳಲು ಖುದ್ದಾಗಿ ಅತಿಥಿ ಶಿಕ್ಷರರೇ BEO ಕಛೇರಿಗೆ ಹೋಗಿ ಕೇಳಿದರೆ BEO ಅಧಿಕಾರಿಯಾದ ಯಡ್ರಾಮಿಯವರು ಅತಿಥಿ ಶಿಕ್ಷಕರಿಗೆ ಗೌರವ ಕೊಡದೆ ಕೇಳಲು ಹೋದ ಎಲ್ಲಾ ಅತಿಥಿ ಶಿಕ್ಷಕರಿಗೆ ನಿಲ್ಲಿಸಿ ಏಕ ವಚನದಲ್ಲಿ ಮಾತಾಡಿ ಬೈದು ಇವತ್ತು ಆಗುತ್ತೆ ನಾಳೆ ಆಗುತ್ತೆ ನಾವು ಸುಮ್ನೆ ಕೂತಿಲ್ಲ ನಮಗೆ ಹಲವಾರು ಕೆಲಸಗಳು ಇದಾವೆ ಎಂದು ತಾತ್ಸಾರವಾಗಿ ಮಾತಾಡಿ ಕಳಿಸಿದ್ದು ಇವರಿಗೆ ಮಾನ್ಯ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅತಿಥಿ ಶಿಕ್ಷಕರು ಆಗ್ರಹಿಸಿದ್ದಾರೆ.
