ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರು
ಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು
ಜೀವನದ ದಾರಿ ತೋರಿಸಿದವಳು
ಮಕ್ಕಳ ಪಾಲಿನ
ದೇವತೆ ಇವಳು
ಆಚಾರ ವಿಚಾರ
ಮನನ ಮಾಡಿದವಳು
ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳು
ಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳು
ಇವಳು ಮರೆಯಲಾಗದ ಮಾಣಿಕ್ಯ ಇವಳು
ಮಕ್ಕಳ ಜ್ಞಾನ ನೋಡಿ ಖುಷಿ ಪಟ್ಟವಳು
ನೋವು ದುಃಖ ಮರೆತು ನಗುವಳು
ಮಕ್ಕಳ ಸಾವು ಕಂಡಾಗ ಬಿಕ್ಕಿ ಬಿಕ್ಕಿ ಬೆಂದವಳು
ತಾಯಿಗೆ ತಾಯಿಯೇ ಸಾಟಿ ಇವಳು ವರ್ಣಿಸಲಾಗದ ಪದಗಳು ಸಿಗಲಾರದ ಅಕ್ಷರಗಳು ಉಸಿರಲ್ಲಿ ಹಸಿರು ಆದವಳು ಉಸಿರಿನ ತಾಯಿ ಇವಳು…
- ದಯಾನಂದ ಪಾಟೀಲ
