ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ವಡಗೇರಾ ದಿಂದ ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಶಾಸಕ ಚನ್ನಾರಡ್ಡಿ ತುನ್ನೂರು ಬೆಂಗಳೂರು ಬಸ್ಸಿಗೆ ಚಾಲನೆ ನೀಡಿ, ವಡಗೇರಾ ತಾಲೂಕಿಗೆ ಇನ್ನಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.
ನಂತರ ಮಾತನಾಡಿದ ಯಾದಗಿರಿ ಸಾರಿಗೆ ಡಿ.ಸಿ. ಶ್ರೀ ಸುನಿಲಕುಮಾರ ಗ್ರಾಮಾಂತರ ಭಾಗಗಳಿಂದ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಕೆಲಸದ ನಿಮಿತ್ತ ನಗರ ಪ್ರದೇಶಗಳಿಗೆ ಹೋಗಲು ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಕಲ್ಪಿಸಲಾಗುತ್ತದೆ. ಪ್ರತಿದಿನ ಈ ಬಸ್ ಸಾಯಂಕಾಲ 4 ಗಂಟೆಗೆ ವಡಗೇರಾದಿಂದ ಹೊರಟು ಹಯ್ಯಾಳ, ಸುರಪುರ, ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 7 ಗಂಟೆ ವೇಳೆಗೆ ಬೆಂಗಳೂರು ತಲುಪುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಡಗೇರಾ ಗ್ರಾ ಪಂ ಅದ್ಯಕ್ಷ ಸಿದ್ದಪ್ಪ, ಶರಣು ಇಟ್ಟಿಗಿ ಕ.ರ.ವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ,ಯಾದಗಿರಿ ಸಾರಿಗೆ ಡಿಸಿ ಸುನಿಲಕುಮಾರ, ಅಧಿಕಾರಿಗಳಾದ ಶಿವಕುಮಾರ, ಡಿಪೋ ಮ್ಯಾನೆಜರ್ ಶಶಾಂಕ, ಹನುಮಂತ ಅಂಗಡಿ, ಮಹೇಶ ಬೊಜ್ಜಿ, ಚಂದ್ರಶೇಖರ ಶಾರದಳ್ಳಿ, ಇಮಾಮ್ ಹಾಗೂ ಸಂತೋಷ ಬೊಜ್ಜಿ ಶಿವರಾಜ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್, ವಡಗೇರಾ
