ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಬಗ್ಗೆ ಮಾತನಾಡಿರುವುದನ್ನು ಶ್ರೀ ಬಸವಯೋಗಿಪ್ರಭುಸ್ವಾಮೀಜಿ ಖಂಡಿಸಿದ್ದಾರೆ.
ಮೈಸೂರು: ಬಸವನಗೌಡ ಪಾಟೀಲ್ ಯತ್ನಾಳ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಆಳ ಗೊತ್ತಿಲ್ಲದೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಎಚ್ಚರಿಸಿದ್ದಾರೆ.
ಪುರೋಹಿತ ಶಾಹಿಗಳ ಹಿಂಬಾಲಕರಂತೆ ಕಲ್ಯಾಣದ ಶರಣರಿಗೆ ಹಿಂಸೆ ಕೊಟ್ಟವರೊಂದಿಗೆ ಸೇರಿಕೊಂಡು ಲಿಂಗಾಯತ ಧರ್ಮದ ವಿರೋಧಿ ಬಸವನಗೌಡ ಪಾಟೀಲ್ ಯತ್ನಾಳ ರಾಜಕೀಯ ತೆವಲಿಗಾಗಿ ದ್ವೇಷದ ಹೇಳಿಕೆಗಳನ್ನು ನೀಡಿ ಮಾನವರ ನಡುವೆ ಸಂಘರ್ಷ ಹುಟ್ಟಿಸುವ ಮತ್ತು ಪ್ರಚೋದನಾ ಹೇಳಿಕೆ ನೀಡುತ್ತಿರುವ ಯತ್ನಾಳ ಬಸವಣ್ಣನವರ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯುವ ಮೂಲಕ ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು
ಸ್ವಾಮೀಜಿ ಆಗ್ರಹಿಸಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ರ ನಾಲಿಗೆ ಜೊತೆ ಮೆದುಳು ಹಾಳಾಗಿರಬಹುದು ಎನಿಸುತ್ತಿದೆ, ಆದ್ದರಿಂದಲೇ ವಿಶ್ವಗುರು ಬಸವಣ್ಣನವರು ನದಿಗೆ ಜಿಗಿದರು ಎಂಬಂತೆ ಬುದ್ದಿಹೀನನಾಗಿ ಮಾತನಾಡಿದ್ದಾರೆ ಎಂದು ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ಕಿಡಿಕಾರಿದ್ದಾರೆ.
ನಿಮ್ಮ ನಿಮ್ಮ ದ್ವೇಷದ ರಾಜಕಾರಣಕ್ಕಾಗಿ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವುದು ಯತ್ನಾಳರಿಗೆ ಶೋಭೆ ತರುವುದಿಲ್ಲ, ಅಹಂಕಾರ ಹೆಚ್ಚಾದಾಗ ಜ್ಞಾನ ಹಾಳಾಗುತ್ತದೆ ಯಾತ್ನಾಳರಿಗೂ ನಾನತ್ವ ಹೆಚ್ಚಾಗಿ ಜ್ಞಾನ ಕೆಟ್ಟು ಅಜ್ಞಾನ ತುಂಬಿದೆ ಎನಿಸುತ್ತಿದೆ,ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಂಡು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
