ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮ ಪಂಚಾಯ್ತಿ, ಕೇಂದ್ರ ಸ್ಥಾನದಲ್ಲಿನ ನಿವಾಸಿ ಮಹಿಳೆಯರು. ಡಿ2ರಂದು ಸಾಮೂಹಿಕ ಮಹಿಳಾ ಶೌಚಾಲಯಕ್ಕೆ ಆಗ್ರಹಿಸಿ, ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ಜರುಗಿದೆ ಹಾಗೂ ಸ್ಥಳೀಯ ಜನಪ್ರತಿನಿಧಿಯೋರ್ವರಿಂದಲೇ, ಸಾಮೂಹಿಕ ಮಹಿಳಾ ಶೌಚಾಲಯದ ನಿವೇಶನ ನುಂಗೋ ಪ್ರಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೂಡಾ ಕೇಳಿಬಂದಿದೆ ತಮ್ಮ ವಾರ್ಡಿನಲ್ಲಿರುವ ಕಳೆದ ಸ್ವಾತಂತ್ರ್ಯ ಪೂರ್ವ ಕಾಲದ, ಅಂದರೆ ಗ್ರಾಮ ಉದಯವಾದಾಗಿನಿಂದ ಬ್ರಿಟೀಷರ ಕಾಲದಲ್ಲಿ ಕಲ್ಲು ಗಾರೆಯಿಂದ ಶತಮಾನಗಳ ಹಿಂದೆಯೇ ನಿರ್ಮಾಣಗೊಂಡಿದ್ದ, ಹಳೇ ತಲೆಮಾರಿನ ಶೌಚಾಲಯ ಹಾಗೂ ಕಾಂಪೌಂಡ್ ನ್ನು ಪುನರ್ ನಿರ್ಮಾಣಕ್ಕಾಗಿ ತೆರವುಗೊಳಿಸಿದ್ದು, ಅದೇ ಜಾಗದಲ್ಲಿ ಶೌಚಾಲಯ ಹಾಗೂ ಕಾಂಪೌಂಡ್ ಪುರ್ನರ್ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ ಹಣ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದಂತೆ ವಿಚಾರಿಸಿದರೆ ಗ್ರಾಮ ಪಂಚಾಯ್ತಿ ಅಧಿಕಾರಿಯಿಂದ, ಸಮರ್ಪಕವಾದ ಉತ್ತರ ದೊರಕುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಿ ಮೀ ದೂರದ ನಿರ್ಜನ ಬಯಲೇ ಗತಿ
ಶೌಚಾಲಯ ತೆರವಾದಾಗಿನಿಂದಲೂ ಶೌಚಕ್ಕಾಗಿ, ತಾವು ಗ್ರಾಮದಿಂದ ಕಿಲೋ ಮೀಟರ್ ದೂರದಲ್ಲಿರುವ, ನಿರ್ಜನ ಪ್ರದೇಶದಲ್ಲಿರುವ ಬಯಲನ್ನೇ ಅವಲಂಬಿಸಿದ್ದು ಅಲ್ಲಿ ಪುರುಷರೂ ಸಹ ಶೌಚಕ್ಕೆ ಬರುವುದು ಸಾಮಾನ್ಯ, ಈ ಸಂದರ್ಭದಲ್ಲಿ ಮಹಿಳೆಯರು ಪುರಷರು ಪರಸ್ಪರ ಅರಿಯದೇ ತೀರಾ ಹತ್ತಿರ ಹತ್ತಿರ ಗಿಡ ಗಂಟೆಗಳ ಮರೆಯಲ್ಲಿದ್ದು, ತೆಗ್ಗು ಗುಂಡಿಗಳ ಮರೆಯಲ್ಲಿ ಶೌಚ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ.
ಮುಲಾಜಿಲ್ಲದ ಮುಜುಗರ..ಅಕ್ಷರಸಹಃ ನರಕಯಾತನೆ
ಕೆಲವು ಬಾರಿ ಒಂದೇ ಮನೆಯ ಪುರಷರು ಮಹಿಳೆಯರು, ಪರಸ್ಪರ ತಿಳಿಯದೇ ಸಮೀಪದಲ್ಲಿಯೇ ಶೌಚ ವಿಸರ್ಜನೆ ಮಾಡುವ ಸಂಗತಿ ಸಾಮಾನ್ಯವಾಗಿದೆ. ಹಲವು ಬಾರಿ ಪರಿಚಿತ ಪುರುಷರು ಕೆಲವು ಬಾರಿ ಅಪರಿಚಿತ ಪುರುಷರೂ ಕೂಡಾ ಶೌಚ ವಿಸರ್ಜನೆಯಾದ ನಂತರ ಸಂದರ್ಭದಲ್ಲಿ ಭೇಟಿಯಾಗಿರುವುದೂ ಇದೆ. ಇದರಿಂದಾಗಿ ತಾವು ತೀರಾ ಮುಜುಗರ ಅನುಭವಿಸುವಂತಾಗಿದ್ದು, ಕೆಲವೊಮ್ಮೆ ತೀರಾ ಆತಂಕ ಪಡುವ ಸನ್ನಿವೇಶಗಳು ನಡೆದಿವೆ ಈ ಕಾರಣದಿಂದಾಗಿ ಮಹಿಳೆಯರು ತಾವು ಶೌಚಕ್ಕೆ ತೆರಳಿದರೆ ಸುರಕ್ಷತಾ ದೃಷ್ಠಿಯಿಂದಾಗಿ, ತಮ್ಮ ಜೊತೆಗೆ ಇಬ್ಬರು ಹೆಚ್ಚುವರಿ ಮಹಿಳೆಯರನ್ನು ಅಂಗರಕ್ಷಕರಾಗಿ ಕರೆದುಕೊಂಡೇ ಹೋಗಬೇಕಿದೆ. ಅಸುರಕ್ಷಿತೆಯ ನಿರ್ಜನ ಪ್ರದೇಶದಲ್ಲಿ ನಿತ್ಯ ಶೌಚ ವಿಸರ್ಜನೆಗೆ ತೆರಳಲೇಬೇಕಾದ, ಅನಿವಾರ್ಯ ದುಸ್ಥಿತಿ ನಿರ್ಮಾಣಗೊಂಡಿದೆ ಎಂದು ಮಹಿಳೆಯರು ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಈ ದುರಾವಸ್ಥೆಯಿಂದಾಗಿ ತಮಗೆ, ನಿತ್ಯ ನರಕ ದರ್ಶನವಾಗುತ್ತಿದ್ದು, ಸದಾ ಆತಂಕ ದುಗುಡ ಮುಜಗರ, ನರಕಯಾತನೆಗಳನ್ನು, ತಾವು ಅನುಭವಿಸುವಂತಹ ದುರಾವಸ್ಥೆ ನಿರ್ಮಾಣಗೊಂಡಿದೆ ಎಂದು ಗ್ರಾಮದ 2 ನೇ ವಾರ್ಡಿನ ಮಹಿಳೆಯರು ದುಮ್ಮಾನ ವಿವರಿಸಿದ್ದಾರೆ. ತಾವು ವಾಸವಿರುವ ಜಾಗದಲ್ಲಿ ಮೊಳಗಾತ್ರದ ಮಣ್ಣು ಅಗೆದರೆ ಸಾಕು, ಮಣ್ಣಿನಡಿ ಏಕ ಶಿಲಾ ಬಂಡೆ ಆವರಿಸಿಕೊಂಡಿದೆ.
ಈ ಕಾರಣದಿಂದಾಗಿ ಶೌಚಗುಂಡಿ ನಿರ್ಮಾಣ ಅಸಾಧ್ಯಾವಾಗಿದ್ದು, ಸರ್ಕಾರದ ಮನೆ ಮನೆಗೆ ಶೌಚಾಲಯ ಸೌಕರ್ಯದಿಂದ ಅನಿವಾರ್ಯ ಕಾರಣದಿಂದಾಗಿ, ವಂಚಿತರಾಗಿರುವುದಾಗಿ ತಮ್ಮ ಸಂಕಷ್ಟಕ್ಕೆ ಸಕಾರಣ ನೀಡುತ್ತಿದ್ದಾರೆ.
ಅಧಿಕಾರಿಗಳಿಗೆ ವಾರದ ಕಾಲಮಿತಿ: ವಾರ್ನಿಂಗ್
ಅದೇನೆ ಇರಲಿ ತಮಗೆ ಅನಿವಾರ್ಯವಾಗಿರುವ, ಸಾಮೂಹಿಕ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಶೀಘ್ರವೇ ಆಗಬೇಕು. ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಹಗರಿಬೊಮ್ಮನಹಳ್ಳಿ ತಹಶೀಲ್ದಾರರರು ಮತ್ತು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ, ಶೀಘ್ರವೇ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕಿದೆ ಅತ್ಯಂತ ತುರ್ತಾಗಿ ಮೂಲ ಸೌಕರ್ಯವಾದ, ಶೌಚಾಲಯ ಕಾಮಗಾರಿ ವಾರದೊಳಗೆ ನಿರ್ಮಿಸಿ ಬಳಕೆಗೆ ನೀಡಬೇಕಿದೆ ಮತ್ತು ಅಧಿಕಾರಿಗಳು ತಮ್ಮ ಅಹವಾಲಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ, ತಾಲೂಕು ಪಂಚಾಯ್ತಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು, ಹೋರಾಟಗಾರರು ಈ ಮೂಲಕ ಎಚ್ಚರಿಸಿದ್ದಾರೆ.
ಹೊಣೆಗೇಡಿ ಗ್ರಾ.ಪಂ ಅಧಿಕಾರಿ
ಸಾರ್ವಜನಿಕರ ಸೇವೆಗಾಗಿ ಗ್ರಾಮದ ಅಭಿವೃದ್ಧಿಗಾಗಿ ನೇಮಕವಾಗಿರೋ ಗ್ರಾಮ ಪಂಚಾಯ್ತಿ ಅಧಿಕಾರಿ, ಕೀಲಿಕೊಡೋ ಗೊಂಬೆಯಂತಾದರೆ ಗ್ರಾಮಸ್ಥರ ಗತಿ ಏನು.!?. ಸರ್ಕಾರ ಅಧಿಕಾರ ನೀಡಿರುವುದಾದರೂ ಏತಕ್ಕಾಗಿ.!?, ಓರ್ವ ಪಿಡಿಓ ಕನಿಷ್ಠ ಸಮಸ್ಯೆ ಬಗೆಹರಿಸದೇ ಹೊಣೆಗೇಡಿತನದಿಂದ ನರಸತ್ತವರಂತಾದರೆ ಹೇಗೆ!?. ಅವರು ಗ್ರಾಮಸ್ಥರ ಸೇವೆಮಾಡುವುದಾಗಿ, ಗ್ರಾಮದ ಆಸ್ತಿ ಕಾಪಾಡುವೆ ಗ್ರಾಮದ ಅಭಿವೃದ್ಧಿ ಮಾಡುವೆ ಎಂದು ಪ್ರಮಾಣ ಮಾಡಿ ಅದಕ್ಕೆಂದೇ ತಾವು ಸರ್ಕಾರಿ ಸೇವೆಗೆ ನೇಮಕವಾಗಿ, ಸರ್ಕಾರದಿಂದ ಪ್ರತಿ ತಿಂಗಳ ಸಂಬಳ ಎಣಿಸೊ ಅವರು ಈ ಸಂದರ್ಭದಲ್ಲಿ ಜನಪರ ಕಾಳಜಿ ವಹಿಸಿ, ತಮ್ಮ ಕರ್ತವ್ಯವನ್ನು ಕಾನೂನು ರೀತ್ಯಾ ಜರುಗಿಸಬಹುದಿತ್ತಲ್ಲ.!? ಅವರೂ ಕೂಡಾ ಪ್ರಭಾವಿಗಳ ಕೀಲಿಗೊಂಬೆಗಳಾದರಾ ಹೇಗೆ.!? ಎಂಬ ಪ್ರೆಶ್ನೆ ಪ್ರಜ್ಞಾವಂತರ ಹಾಗೂ ಹೋರಾಟಗಾರರದ್ದಾಗಿದೆ.
ಅಮಾನೀಯ ನಡೆಗೆ ಅಸಂಖ್ಯಾತ ಜನರ ಹಿಡಿ ಶಾಪ
ಈ ದುರಾವಸ್ಥೆಗೆ ಗ್ರಾಮದ ಓರ್ವ ವ್ಯಕ್ತಿಯೇ ಪರೋಕ್ಷ ಕಾರಣ ಎಂಬ ಕೂಗು ಗ್ರಾಮದೆಲ್ಲೆಡೆ ಹರಡಿದೆ. ಓರ್ವ ವ್ಯಕ್ತಿ ಇಷ್ಟೆಲ್ಲಅ ಅವಾಂತರಕ್ಕೆ ಕಾರಣನಾಗಿ,
ಸಾರ್ವಜನಿಕ ಮೂಲ ಸೌಕರ್ಯಕ್ಕೆ ಅಡ್ಡಿ ಪಡಿಸುವ ಮೂರ್ಖ ಯಾರೋ ತಿಳಿಯದಾಗಿದೆ. ನೂರಾರು ಮಹಿಳೆಯರ ಶಾಪಕ್ಕೆ ಗುರಿಯಾಗಿ, ನೆರೆ ಹೊರೆಯವರ ಸಂಕಷ್ಟಕ್ಕೆ ಕಾರಣನಾಗಿರೋನು ಓರ್ವ ಮನುಷ್ಯನಾ.!? ಎಂಬ ಪ್ರೆಶ್ನೆ ಎಂತಹವರಿಲ್ಲಿಯೂ ಮೂಡದೇ ಇರದು. ಸಾರ್ವಜನಿಕ ಆಸ್ತಿಯನ್ನು ತನ್ನದೆಂದು ಹೇಳಿಕೊಳ್ಳೋನು ಎಂದಿಗೂ ನಾಯಕನಾಗಲಾರ., ತಲೆ ತಲಾಂತರಗಳಲ್ಲಿಯೂ ಅವನು ಖಳನಾಯಕನಾಗೇ ಉಳಿತಾನೆ. ಅಧರ್ಮವನ್ನು ಯಾವ ಧರ್ಮವೂ ಭೋದಿಸಲ್ಲ, ಆದರೆ ಈ ಸ್ಥಳೀಯ ಖಳನಾಯಕನು ಅದ್ಯಾವ ಧರ್ಮನೀತಿ ಪಾಲಿಸುತ್ತಿರುವನೋ.. ಯಾರಿಗೂ ತಿಳಿಯದಾಗಿದೆ. ಖುರಾನ್, ಬೈಬಲ್, ಭಗವದ್ಗೀತೆಗಳು ಮಾನವೀಯತೆಗಳನ್ನು ಸಾರಿವೇ ಹೊರತು, ಆಮಾನವೀಯತೆ ಅನಾಗರೀಕತೆ ಲೋಭಿತನ ಭ್ರಷ್ಠತೆಗಳನ್ನಲ್ಲ ಎಂಬುದನ್ನು ಆ ನಾಮಾರ್ಧ ಅರಿಯಬೇಕಿದೆ.
ಜನ ನಾಯಕನಾ.. ನಾಮಾರ್ಧನನಾ.!?
ವಾಸ್ತವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆದರೂ ಜನಪ್ರತಿನಿಧಿ ವೇಷದಲ್ಲಿ, ಇಂತಹ ಖಳನಾಯಕರೂ ಇರುತ್ತಾರೆ ಎಂಬುದಕ್ಕೆ ಜೀವಂತ ಸಾಕ್ಷಿ ಹನಸಿ ಗ್ರಾಮದಲ್ಲಿ ಸಿಗುತ್ತೆ ಜನಪ್ರತಿನಿಧಿಯೇ ಸಾರ್ವಜನಿಕರ ಸ್ಥಿರಾಸ್ತಿ ನಿಧಿಯನ್ನು ಕಬಳಸಿದರೆ, ಅದನ್ನು ಕಾಪಾಡುವವರು ಯಾರು.!? ಎಂಬ ಯಕ್ಷ ಪ್ರೆಶ್ನೆ ಇಲ್ಲಿಯ ಪ್ರಜ್ಞಾವಂತರದ್ದು. ಶಾಸಕರಾದ ನೇಮಿರಾಜ ನಾಯಕರು, ಈ ದುರಾವಸ್ಥೆಗೆ ಕಾರಣರಾದ ನಾಮರ್ಧನಿಗೆ, ಮಾನವೀಯತೆ ಹಾಗೂ ಕಾನೂನಿನ ಪಾಠ ಹೇಳಿ ಶೀಘ್ರವೇ ಮೂಲ ಸೌಕರ್ಯ ಒದಗಿಸಬೇಕಿದೆ.
ಚೊಂಬು- ಕಸಬರಿಗೆ ಹೋರಾಟ ಖಚಿತ
ಸ್ಥಳೀಯ ಶಾಸಕರು ಕೂಡ ನಿರ್ಲಕ್ಷ್ಯ ತೋರಿದರೆ ಗ್ರಾಮಸ್ಥರು ಕೈಯಲ್ಲಿ ಚೊಂಬು ಇನ್ನೊಂದು ಕೈಯಲ್ಲಿ ಕಸಬರಿಗೆ ಹಿಡಿದು, ವಿಭಿನ್ನವಾದ ಹೋರಾಟದ ಮೂಲಕ ನ್ಯಾಯ ಪಡೆಯಲೇಬೇಕಾಗುತ್ತದೆ ಇದು ಖಚಿತ ಒಂದೆಡೆ ಬೀದಿಗಿಳಿದು ಹೋರಾಟ, ಇನ್ನೊಂದೆಡೆ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಹಲವು ಮಹಿಳಾ ಸಂಘಟನೆಗಳು, ಮಹಿಳಾ ಹೋರಾಟಗಾರರು ಈ ಮೂಲಕ ಎಚ್ಚರಿಸಿದ್ದಾರೆ.
ವರದಿ- ಛಲವಾದಿ ನಾಗರಾಜ್
