ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷಿ ತಜ್ಞ ಲಿಂ. ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ

ಬಾಗಲಕೋಟೆ/ ಹುನಗುಂದ : ಸಾಹಿತ್ಯ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಕೃಷಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಪ್ರಾಧ್ಯಾಪಕರಿಗಿಂತಲೂ ಮಿಗಿಲಾದ ಪಾಂಡಿತ್ಯದ ಅನುಭವವನ್ನು ಲಿಂ. ಡಾ|| ಮಲ್ಲಣ್ಣ ನಾಗರಾಳ ರವರ ಕಾರ್ಯ ಅಮೋಘವಾದದ್ದು ಎಂದು ಹುನಗುಂದದ ಸಾಹಿತಿ ಡಾ ನಾಗರಾಜ ನಾಡಗೌಡ ಹೇಳಿದರು.


ಶ್ರೀ ವಿಜಯ ಮಹಾಂತೇಶ ಪದವಿಪೂರ್ವ ಕಾಲೇಜಿನಲ್ಲಿ ಹೊನ್ನಗುಂದ ಸಾಹಿತ್ಯ ವೇದಿಕೆ ಹಮ್ಮಿಕೊಂಡ ಲಿಂ. ಡಾ|| ಮಲ್ಲಣ್ಣ ನಾಗರಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಕನಿಷ್ಟ ಪ್ರಮಾಣದ ವಿದ್ಯಾಭಾಸ ಮಾಡಿ ಪ್ರಮುಖ
ಕೃಷಿ ಕಾಯಕದ ಜೊತೆಗೆ ಬಹುತೇಕ ಮಠದ ಪೂಜ್ಯರ ಜೊತೆಗೆ ಒಡನಾಡಿಯಾಗಿ, ವಚನ ತತ್ವಗಳನ್ನು ಪಾಲಿಸುತ್ತ ಶರಣ ಕಾಯಕದಲ್ಲಿ ಕಾಲ ಕಳೆದರು.
ಜೊತೆಗೆ ಘನಮಠ ಶಿವಯೋಗಿಗಳರವರ ಕೃಷಿ ಜ್ಞಾನ ಪ್ರದೀಪ್ತಿಕೆಯನ್ನು ಜೀವನದುದ್ದಕ್ಕೂ ಬಳಸಿಕೊಂಡು ತಮ್ಮ ಭೂಮಿ ಜತೆ ಬಹುತೇಕ ರೈತರ ಭೂಮಿಗೆ ಸ್ವಯಂ ಪ್ರೇರಣೆಯಿಂದ ಹೋಗಿ ಭೂಮಿ ಸಮತೋಲನ. ಗುಂಡಾವರ್ತಿ, ಓಡುವ ನೀರನ್ನು ತಡೆಯುವುದು ಮತ್ತು ಬಿದ್ದ ನೀರು ಇಂಗುವoತೆ ಕೃಷಿ ಜ್ಙಾನವನ್ನು ಲಿಂ. ಮಲ್ಲಣ್ಣನವರು ಮೈಗೂಡಿಸಿಕೊಂಡು ಅವರೊಬ್ಬ ವಿಶೇಷ ವ್ಯಕ್ತಿಯಾಗಿದ್ದರು ಎಂದು ಹುನಗುಂದದ ಸಾಹಿತಿ ಡಾ|| ನಾಗರಾಜ ನಾಡಗೌಡ ತಿಳಿಸಿದರು.
ಹುನಗುಂದದ ಇಂಗ್ಲಿಷ್ ಪ್ರಾಧ್ಯಾಪಕ ಶ್ರೀಶೈಲ ಗೊಲಗೊಂಡ ಮಾತನಾಡಿ ಅವರು ಮಾಡಿದ ಸಮಾಜ ಸೇವೆ, ಶರಣ ಜೀವನ ಕೃಷಿ ತತ್ವಜ್ಞಾನ. ಅವರು ಒಬ್ಬ ಸಂಶೋಧಕರಾಗಿ ಮಾಡಿದ ಮಹತ್ವದ ಬಗ್ಗೆ ಮುಂದಿನ ಪೀಳಿಗೆಗೆ ಮನದಟ್ಟುವಂತೆ ಮುದ್ರಣಗಳು ಆಗಬೇಕು ಎಂದು ತಿಳಿಸಿದರು.
ಹುನಗುಂದದ ನ್ಯಾಯವಾದಿ ಸಾಹಿತಿ ಮಹಾಂತೇಶ ಅವಾರಿ ಮಾತನಾಡಿ ಲಿಂ. ಮಲ್ಲಣ್ಣ ನಾಗರಾಳ ಅವರು ಸ್ಮರಣೆ ನೆನಪು ಬಸವ ತತ್ವ ಪಾಲನೆ ಜೊತೆಗೆ ನೆಲ, ನುಡಿ, ಸಂಸ್ಕçತಿಯನ್ನು ಬದುಕಿನಲ್ಲಿ ರೂಢಿಸಿಕೊಂಡು ಅವರೊಬ್ಬ ಮಾದರಿ ವ್ಯಕ್ತಿಯಾಗಿದ್ದರು ಎಂದರು. ಶಿಕ್ಷಕ ಪ್ರಭು ಮಾಲಗಿತ್ತಿಮಠ , ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಉಪನ್ಯಾಸಕ ರವಿ ಹಾದಿಮನಿ ಮಾತನಾಡಿದರು. ಹೊಸವೇ ಅಧ್ಯಕ್ಷ ಸಂಗಮೇಶ ಮುಡಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು ಲಿಂ. ಡಾ| ಮಲ್ಲಣ್ಣ ನಾಗರಾಳ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾಲೇಜು ಪ್ರಾಚಾರ್ಯ ಎಸ್. ಎಸ್. ಬೋಳಿಶಟ್ಟರ ಮಹಾಂತೇಶ ನಾಗರಾಳ, ವಿರೇಶ ಕುರ್ತಕೋಟಿ, ಡಾ| ನಾಗರತ್ನ ಭಾವಿಕಟ್ಟಿ ಶೈಲಾ ಜಿಗಳೂರ,
ಸಂಗಮೇಶ ಹೊದ್ಲೂರ, ಬಸವರಾಜ ಕಣ್ಣೂರ, ಎಸ್ ಎಸ್.ಮುಳ್ಳೂರ, ಶಶಿಧರ ದರಗಾದ ಹಾಗೂ ಜಗದೀಶ ಹದ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಶಿಕ್ಷಕಿ ಗೀತಾ ತಾರಿವಾಳ ಪ್ರಾರ್ಥಿಸಿದರು, ಮಹಿಬೂಬ ಚಿತ್ತರಗಿ ಸ್ವಾಗತಿಸಿದರು, ಜಗದೀಶ ಹಾದಿಮನಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ