ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರಬೇನೂರು ಇಂಡಿಯನ್ ಕೇನ್ ಪವರ್ ಲಿಮಿಟೆಡ್ ಘಟಕ ಜ್ಞಾನ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಶುಗರ್ಸ್ ಕಾರ್ಖಾನೆಯಲ್ಲಿ ಇಂದು ದಿ :04-12-2024 ರಂದು ಬಾಯ್ಲರ್ ಪ್ರದೀಪನ ಕಾರ್ಯಕ್ರಮ ಹಾಗೂ ಕೇನ್ ಕ್ಯಾರಿಯರ್ ಪೂಜೆ ಹಮ್ಮಿಕೊಂಡಿದ್ದು, ಇದೇ ದಿನದಂದು ರೈತರು ಸನ್ 2018-19 ನೇ ಸಾಲಿನ ಟ್ಯಾಕ್ಟರ್ ಟೋಳಿ, ರೈತರ ಕಬ್ಬಿನ ಹಣ ಬಾಕಿ, ಗಾಡಿ ಮಾಲೀಕರ ಬಾಕಿ ಹಣ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಬೋಜಾ ಕಡಿಮೆ ಮಾಡಲು ಒತ್ತಾಯಿಸಿ ರೈತರು ಧರಣಿ ನಡೆಸಿದ್ದಾರೆ.
ಶ್ರೀ ಗಿರಿಮಲ್ಲಪ್ಪ.ಕ.ಬಿರಾದರ್ ರೈತ ಮುಖಂಡರು ಮಾತನಾಡಿ ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾರಾಟ ಮಾಡಿದರು ಸಹಿತ ರೈತರು ಹಾಗು ಟ್ಯಾಕ್ಟರ್ ಮಾಲೀಕರಿಗೆ ಬರಬೇಕಾದಂತಹ ಬಾಕಿ ಹಣವನ್ನು ಕೊಡಿಸುತ್ತೇವೆ ಎಂದು ಹೇಳಿ ಇಲ್ಲಿಯವರೆಗೂ ಬಾಕಿ ಹಣವನ್ನು ಕೊಟ್ಟಿರುವುದಿಲ್ಲ. ಹಾಗೂ ಕೆಲವರಿಗೆ ಚೆಕ್ ಮೂಲಕ ಹಣ ಪಾವತಿ ಮಾಡಿದ್ದರೂ ಆ ಚೆಕ್ಕುಗಳು ಬೌನ್ಸ್ ಆಗಿವೆ ಎಂದು ರೈತರಿಗೆ ಆದ ಅನ್ಯಾಯವನ್ನು ಹೇಳಿಕೊಂಡರು.
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ಎಷ್ಟೋ ಸಲ ಅರ್ಜಿ ಸಲ್ಲಿಸಿದರು ಏನೋ ಪ್ರಯೋಜನವಾಗಿಲ್ಲ ಎಂದು ಆದ ಕಾರಣ ಹಿರೇ ಬೇನೂರ್, ಅಗರಖೇಡ, ಗುಬ್ಬೆವಾಡ, ಶಿರಗೂರ, ಬಯ್ಯಾರ್, ಆಳೂರ ಹಾಗು ಇನ್ನು ಅನೇಕ ಗ್ರಾಮದ ರೈತರೂ ಸೇರಿಕೊಂಡು ಕಾರ್ಖಾನೆಯ ಮುಂದುಗಡೆ ದರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.
ಈ ಧರಣಿ ಸತ್ಯಾಗ್ರಹದಲ್ಲಿ ಶ್ರೀ ಗಿರಿಮಲ್ಲಪ್ಪ.ಕ. ಬಿರಾದಾರ್,ಶ್ರೀ ಮಜೀಬ್ ಶ್ಯಾಮಣ್ಣವರ್, ಶ್ರೀ ಅಣ್ಣಾರಾಯ ಬಿರಾದಾರ್, ಶ್ರೀ ಭೀಮರಾಯ ಕಣ್ಣೀ, ಶ್ರೀ ಸಿದ್ದರಾಮ ಹಳಿಯಾಳ,ಶ್ರೀ ಶಿವಯೋಗಪ್ಪ ದೊಡ್ಡಿ, ಶ್ರೀ ಬಸವರಾಜ್ ಅರ್ಜುನಗಿ, ಶ್ರೀ ಬಸವರಾಜ ಹಂಜಗಿ,ಶ್ರೀ ಪುಂಡು ಸೌಕಾರ ನಿಂಬರಗಿ, ಶ್ರೀ ಅಣ್ಣಾರಾಯ ಗುವಾಡಿ ಇನ್ನೂ ಅನೇಕ ನೂರಾರು ರೈತರು ಹಾಗೂ ಟ್ಯಾಕ್ಟರ್ ಮಾಲೀಕರು ಕೂಡಿಕೊಂಡು ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ವರದಿ ಮನೋಜ್ ನಿಂಬಾಳ

One Response
Agarkhed ind