
ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಪುನೀತ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಆಹಾರ ಸಾಮಗ್ರಿಗಳ ವಿತರಣೆ ನಡೆಯಿತು.
ಆರ್ಥಿಕ ಸಂಕಷ್ಟಗಳ ನಡುವೆಯೂ ಅನಾಥರ ಸೇವೆಯಂತಹ ಮಾನವೀಯ ಕಾರ್ಯಗಳನ್ನು ಮಾಡುತ್ತಿರುವ ಸಿದ್ದಾಪುರ ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದವರ ಸಂಕಷ್ಟದ ಸೇವೆಯನ್ನು ಗಮನಿಸಿದ ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದವರು ಆಹಾರ ಸಾಮಗ್ರಿಗಳ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿದ ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕರಿಂದ ಆಶ್ರಯಧಾಮದಲ್ಲಿ ನಡೆಯುವ ಸೇವೆಯ ವಿವರವನ್ನು ಪಡೆದುಕೊಂಡು ನಾಗರಾಜ ನಾಯ್ಕರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಾಗರಾಜ ನಾಯ್ಕರನ್ನು ಅಭಿನಂದಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ನಾಗರಾಜ ನಾಯ್ಕರು ಸಾಲಮಾಡಿ ಅನಾಥರ ಸೇವೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂತು. ಈ ಬಗ್ಗೆ ನಮ್ಮ ಸಂಘದ ಪದಾಧಿಕಾರಿಗಳಲ್ಲಿ ಚರ್ಚಿಸಿದಾಗ ನಾವೆಲ್ಲರೂ ಸೇರಿ ಈ ಸೇವೆಯ ಜೊತೆ ಕೈಜೋಡಿಸೋಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಈ ದಿನ ನಾವು ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಹಾಗೂ ಹಳೆಯ ಬಟ್ಟೆಗಳನ್ನೂ ತಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ನೀಡಲಾಗುವುದು. ಸಂಕಷ್ಟದ ಪರಿಸ್ಥಿತಿಯಲ್ಲಿ ಕೂಡಾ ಎದೆಗುಂದದೆ ಆಶ್ರಮವಾಸಿಗಳ ಸೇವೆ ಮಾಡುತ್ತಿರುವ ನಾಗರಾಜ ನಾಯ್ಕರ ಕಾರ್ಯವನ್ನು ನಾವು ಗಮನಿಸಿದ್ದೇವೆ. ನಾವು ಇವರ ಈ ಮಾನವೀಯ ಸೇವೆಯ ಜೊತೆ ನಿಲ್ಲಲಿದ್ದೇವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ನಾಗರಾಜ್ ಪಿ ರವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ನಾಗರಾಜ್ ಪಿ ರವರ ನೇತೃತ್ವದಲ್ಲಿ ಸಂಘದ ಕಾರ್ಯದರ್ಶಿ ಸುರೇಶ್ ಪಿ, ಸಹಕಾರ್ಯದರ್ಶಿ ಬಾಬು ಟಿ, ಖಜಾಂಜಿ ನಾಗರಾಜ ಪಾನಿಪುರಿ, ಗೌರವ ಅಧ್ಯಕ್ಷರಾದ ಸುರೇಶ್, ಸಂಘದ ನಿರ್ದೇಶಕರುಗಳಾದ ದಿನೇಶ್ ಗೌಡ, ಉದಯ್ ಕುಮಾರ್,ಶ್ರೀನಾಥ ಮತ್ತು ಸಂಘದ ಸದಸ್ಯರುಗಳಾದ ಆರ್ಯ, ರಾಘು, ಸೋಮಶೇಖರ್ (ಶಂಭು ಅಣ್ಣ) ಮುಂತಾದವರು ಉಪಸ್ಥಿತರಿದ್ದರು.
