ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಗತ್ಯತೆಗಳ ಅಳತೆಗೋಲಿನ ಅರಿವಿರಲಿ..

ಹೊತ್ತು ಸಾಗುತ್ತಲೇ ಇರುತ್ತೇವೆ ತಲೆಯಲ್ಲಿ ಸದಾ ಒಂದಿಲ್ಲೊಂದು ಯೋಚನೆಗಳ ಭಾರವನ್ನು.
ಕೆಲವು ಅನಗತ್ಯ ಎಂದು ಗೊತ್ತಿದ್ದರೂ ಅತಿಯಾಗಿ ಹಚ್ಚಿಕೊಂಡು ಎಷ್ಟೋ ನಿರ್ನಿದ್ರೆಯ ರಾತ್ರಿಗಳನ್ನು ಕಳೆದಿರುತ್ತೇವೆ, ದಿನಚರಿ ಅಸ್ತವ್ಯಸ್ತವಾಗಿರುತ್ತದೆ ಹಾಗೆ ಚಿಂತಿಸುವುದರಿಂದ ಅಸಲಿ ಪರಿಸ್ಥಿತಿಯೇನು ಧುತ್ತೆಂದು ಬದಲಾಗುವುದಿಲ್ಲ. ಆದರೂ ಕೆಲವೊಮ್ಮೆ ನಾವು ಅಂಟಿಕೊಂಡ ವಿಚಾರಗಳಿಂದ ಅಷ್ಟು ಸುಲಭಕ್ಕೆ ಹೊರ ಬರಲಾರೆವು. ಇಂತ ನಮ್ಮ ವರ್ತನೆಗಳೇ ಬಹುಪಾಲು ನಮ್ಮ ಬದುಕಿನ ಸಮಸ್ಯೆಗಳಿಗೆ ಕಾರಣವಾಗಿರುತ್ತವೆ. ಚಿಂತೆಗಳು ಚಿಂತನಾ ಶಕ್ತಿಯನ್ನು ಕಸಿದುಕೊಂಡಿರುತ್ತವೆ.

ಇತ್ತೀಚಿಗೆ ಅತುಲ್ ಸುಭಾಷ್ ಅನ್ನುವವರ ಆತ್ಮಹತ್ಯಾ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ನಾವು ಅಗತ್ಯಕ್ಕಿಂತ ಹೆಚ್ಚು ಹೊರಗಿನ ಯಾವುದೇ ವ್ಯಕ್ತಿ / ವಸ್ತು /ಸಂಬಂಧ ಅಥವಾ ಪರಿಸ್ಥಿತಿಗಳಿಗೆ ಮಹತ್ವ ಕೊಡುತ್ತಾ ಹೋದಾಗ ಜೀವನ ಯಾವ ಮಟ್ಟಕ್ಕೆ ಪಾತಾಳ ಸೇರುತ್ತದೆ ಎನ್ನುವುದಕ್ಕೆ ಇದೊಂದು ಕೇಸ್ ದೊಡ್ಡ ಉದಾಹರಣೆ. ಅವರಿಗೆ ಅನ್ಯಾಯವಾಗಿದೆ ನಿಜ. ಮಾನಸಿಕ ಶೋಷಣೆ ಅನುಭವಿಸಿದ್ದಾರೆ ನಿಜ. ಕಾನೂನು ದುರುಪಯೋಗ ಆಗಿದೆ, ವ್ಯವಸ್ಥೆ ಅವರ ಜೀವ ಹಿಂಡಿದೆ, ಎಲ್ಲವೂ ನಿಜ. ಆದರೆ ನೊಂದವರೆಲ್ಲಾ ಸಾವಿನ ಹಾದಿಯನ್ನೇ ಹಿಡಿಯಬೇಕು ಅಂತಿದ್ದರೆ ಜಗತ್ತಿನಲ್ಲಿ ಯಾರು ಬದುಕಿರುತ್ತಿದ್ದರು.!? ಇಲ್ಲಿ ಅವರವರ ನೋವು ಸಮಸ್ಯೆಗಳು ಅವರವರಿಗೆ ದೊಡ್ಡವೇ. ಯಾರು ನೋವುಗಳನ್ನು ಇವಿಷ್ಟೇ ಎಂದು ನಾವು ಜಡ್ಜ್ ಮಾಡಲಾಗದು. ಆದರೆ ಪರಿಸ್ಥಿತಿಗಳು ನಮ್ಮ ಆತ್ಮ ಸ್ಥೈರ್ಯಕ್ಕಿಂತ ಬಲಶಾಲಿಯಾಗಲು ಬಿಡುವುದು ನಮ್ಮದೇ ತಪ್ಪು ಅಲ್ಲವೇನು.?

ಅವರೇನೋ ಇಲ್ಲಿಂದ ನಿರ್ಗಮಿಸಿದರು. ಆದರೆ ಅವರ ಸಮಸ್ಯೆ ಪರಿಹಾರವಾಯಿತಾ ? ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಅಭಿಯಾನಗಳು ನಡೆಯಬಹುದು, ಅವರು ಅನುಭವಿಸಿದ ನೋವಿಗೆ ನ್ಯಾಯವೂ ಸಿಗಬಹುದು. ಆದರೆ ಹೋದ ಜೀವ ಮತ್ತೆ ಬಾರದು. ಇವರ ಕೇಸ್ ಜಂಜಾಟ, ಜಗಳ, ಗಂಡ ಹೆಂಡತಿ ಮನಸ್ತಾಪದ ನಡುವೆ ಬೆಳೆಯುತ್ತಿರುವ ಅವರ ಮಗುವಿನ ಮನಸ್ಸು ಎಷ್ಟು ವ್ಯಗ್ರವಾಗಿರಬಹುದು..? ಆ ಮಗು ಮನದಲ್ಲಿ ಹುಟ್ಟುವ ನಕಾರಾತ್ಮಕ ಭಾವಗಳು, ವಿಷಯ ವಸ್ತುಗಳು ಆತನ ಬದುಕನ್ನೇ ಕತ್ತಲೆಗೆ ದೂಡಬಹುದು. ಆ ಮಗುವಿನಂತೆಯೇ ಪ್ರಸ್ತುತ ಸಮಾಜದಲ್ಲಿ ಕೌಟುಂಬಿಕ ಜಗಳ ಮನಸ್ತಾಪಗಳ ನಡುವೆ ಎಷ್ಟೋ ಮಕ್ಕಳು ನಲಿವನ್ನು ಮರೆತು ನರಳುತ್ತಿದ್ದಾರೆ. ಇಂತ ವಾತಾವರಣದಲ್ಲಿ ಬೆಳೆದವರು ದೇಶದ ಉಜ್ವಲ ಭವಿಷ್ಯಕ್ಕೆ ಯಾವ ಕೊಡುಗೆ ಕೊಟ್ಟಾರು.!?

ವ್ಯವಸ್ಥೆ ಹದಗೆಟ್ಟಿದೆ ನಿಜ. ಅತುಲ್ ನಂತೆ ಎಷ್ಟೋ ಜನ ಅದರಿಂದ ನೋವು ಅನುಭವಿಸಿ ಸರಿದು ಹೋಗಿದ್ದಾರೆ. ಹಾಗೆಯೇ ವ್ಯವಸ್ಥೆ ಮತ್ತು ತಮ್ಮ ಸಮಸ್ಯೆಗಳ ವಿರುದ್ಧ ತಿರುಗಿ ಬಿದ್ದು ಗೆದ್ದವರೂ ಇದ್ದಾರೆ. ಹುಡುಕಿ ಹೊರಟರೆ ಸಾಕಷ್ಟು ದಾರಿಗಳಿವೆ ಸಮಸ್ಯೆಗಳಿಂದ ಹೊರಬರಲು. ಯಾವುದೇ ವಿಷಯವನ್ನು ಕ್ಷಣಕಾಲ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯನ್ನು ನಾವೆಲ್ಲರೂ ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುವುದಿಲ್ಲವಾ ?! ನಮ್ಮ ಬದುಕಿನ ಸ್ವಾಸ್ತ್ಯಕ್ಕೆ ದೇಹಾರೋಗ್ಯದ ಜೊತೆಗೆ ಮಾನಸಿಕ ಅರೋಗ್ಯವು ತುಂಬಾ ಮುಖ್ಯ. ಬೇಡದ ಗೊಡವೆಗಳೊಳಗೆ ಕಳೆದು ಹೋಗಿ ಅಧಃಪತನದೆಡೆಗೆ ಸಾಗಿ ಅಮೂಲ್ಯ ಜೀವನ ನಾಶ ಮಾಡಿಕೊಳ್ಳುವ ಮೊದಲು ಕೊಂಚ ಸಾವಧಾನದಿಂದ ಯೋಚಿಸಿ ನಮ್ಮ ಸುತ್ತಲಿನ ಬಂಧಗಳ ಜೊತೆಗೆ ಒಂದು ಅದ್ಭುತ ಬದುಕನ್ನು ಕಟ್ಟಿಕೊಂಡು ಅರೋಗ್ಯವಂತ ಸಮಾಜಕ್ಕೆ ನಾಂದಿ ಹಾಡೋಣ.. ಏನಂತೀರಿ..?

  • ಪಲ್ಲವಿ ಚೆನ್ನಬಸಪ್ಪ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ