
ಬೆಂಗಳೂರು : ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬುದನ್ನು ಕು.ಹಂಸಿನಿ ಕಾರಂತ್ ಸಾಬೀತು ಪಡಿಸಿದ್ದಾರೆ.
ಸಣ್ಣ ವಯಸ್ಸಿನಿಂದಲೇ ತಾಯಿ ಮಮತಾ ಕಾರಂತರ ಬಳಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ ಹಂಸಿನಿ ಇದೇ ಡಿಸೆಂಬರ್ 22 ರಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಂ.ಎಲ್.ಆರ್ ಕನ್ವೆನ್ಷನ್ ಸೆಂಟರ್ ನಲ್ಲಿ ರಂಗಪ್ರವೇಶ ಮಾಡಲಿದ್ದಾರೆ.
ಕು. ಹಂಸಿನಿ ಕುರಿತು

ಅನುಭವಿ ಕಲಾವಿದೆ ಆಗಿರುವ ಹಂಸಿನಿ ಅವರು ಆಳ್ವಾಸ್ ನುಡಿಸಿರಿ, ತಮಿಳುನಾಡಿನ ಚಿದಂಬರಂ ನಲ್ಲಿ ನಡೆಯುವ ‘ನಾಟ್ಯಾಂಜಲಿ’ ನೃತ್ಯೋತ್ಸವ, ಗುಜರಾತಿನಲ್ಲಿ ನಡೆಯುವ ಸ್ಪಂದನ ನೃತ್ಯ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಗುರುವಾಯೂರು, ಉಡುಪಿ, ವೆಲ್ಲೋರ್ ಗೋಲ್ಡನ್ ಟೆಂಪಲ್ ನಲ್ಲೂ ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾರತ ಅಲ್ಲದೆ ಶ್ರೀ ಲಂಕಾ, ನೇಪಾಳದಲ್ಲೂ ನೃತ್ಯಾಸಕ್ತರನ್ನು ರಂಜಿಸಿದ್ದಾರೆ. ಪ್ರತಿಷ್ಠಿತ ಸಿಸ್ಕೊ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಹಂಸಿನಿ ಅವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ.
ಗುರುಗಳ ಬಗ್ಗೆ
ಸ್ವತಃ ಶ್ರೇಷ್ಠ ನೃತ್ಯಗಾರ್ತಿ ಹಾಗೂ ಕು.ಹಂಸಿನಿ ಅವರ ತಾಯಿಯಾಗಿರುವ ಶ್ರೀಮತಿ ಮಮತಾ ಕಾರಂತರು ಸಾಕಷ್ಟು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಶ್ರೀಮತಿ ಮಮತಾ ಅವರ ಸಮರ್ಥ ಮಾರ್ಗದರ್ಶನದಿಂದ ಹಂಸಿನಿ ಅವರು ಭರತನಾಟ್ಯ ಪ್ರಕಾರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ರಂಗಪ್ರವೇಶ ಎಲ್ಲಿ?

ಬೆಂಗಳೂರಿನ ಪೂರ್ವ ಭಾಗದಲ್ಲಿರುವ ವೈಟ್ ಫೀಲ್ಡ್ ನಲ್ಲಿರುವ ಎಂ.ಎಲ್.ಆರ್ ಕನ್ವೆನ್ಷನ್ ಹಾಲ್ ನಲ್ಲಿ (ಫೀನಿಕ್ಸ್ ಮಾಲ್ ಹತ್ತಿರ) ಇದೆ ಡಿಸೆಂಬರ್ 22 (ಭಾನುವಾರದಂದು) ಬೆಳಿಗ್ಗೆ 10:30 ಕ್ಕೆ ಕು.ಹಂಸಿನಿ ಅವರು ರಂಗಪ್ರವೇಶ ನಡೆಯಲಿದೆ. ನೃತ್ಯಾಸಕ್ತರಿಗೆ ಉಚಿತ ಪ್ರವೇಶ ಇರಲಿದೆ.
