ಬೀದರ್ : ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 22.12.2024 ರಂದು ಅಂಬೇಡ್ಕರ್ ವೃತ್ತ ಬೀದರ್ ನಲ್ಲಿ ಸಹ ಬಾಳ್ವೆಯ ಕ್ರಿಸ್ಮಸ್ ಆಚರಣೆ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮವನ್ನು ರವಿವಾರ ಸಂಜೆ 5:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಧರ್ಮ ಗುರುಗಳು,ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರುಗಳು ಭಾಗವಹಿಸಲಿರುವರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಯೇಸು, ಜನನ ಪ್ರಕರಣ ತೋರಿಸುವ ನಾಟಕ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಹಲ್ಬರ್ಗ ಭಾಲ್ಕಿ ಮಕ್ಕಳಿಂದ ಹಾಗೂ ನೇತ್ರದಾನ ಜಾಗೃತಿ ಮೂಡಿಸುವುದು ಆಗಿದೆ. ದೇಶದಲ್ಲಿ ಎಷ್ಟೋ ಜನರು ಕಣ್ಣಿಲ್ಲದೆ ಇದ್ದಾರೆ ನಾವು ನಮ್ಮ ದೇಹವನ್ನು ತ್ಯಜಿಸಿದ ನಂತರ ನಮ್ಮ ಕಣ್ಣುಗಳು ಮಣ್ಣಿನಲ್ಲಿ ಹೋಗಿ ಹಾಳಾಗುವುದಕ್ಕಿಂತ ಒಬ್ಬ ಕಣ್ಣಿಲ್ಲದ ವ್ಯಕ್ತಿಗೆ ದೃಷ್ಟಿ ನೀಡುವ ಒಳ್ಳೆಯ ಕೆಲಸವಾಗಬೇಕು ಎನ್ನುವುದು ಇದರ ಮೂಲ ಉದ್ದೇಶ. ಕ್ರಿಸ್ಮಸ್ ಆಚರಣೆಯು ವಿಶಿಷ್ಟ ರೀತಿಯಲ್ಲಿ ಆಚರಿಸಿ ಒಂದು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತವಿದೆ.
ಇದೇ ಕಾರ್ಯಕ್ರಮದಲ್ಲಿ ಶಿಕ್ಷಣ, ಸಮಾಜ ಸೇವೆ,ವೈದ್ಯಕೀಯ, ಪೋಲಿಸ್ ಮತ್ತು ಕಾನೂನು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ, ಕಲೆ ಮತ್ತು ಸಾಹಿತ್ಯ ಸೇರಿ ಸುಮಾರು 150 ಜನರಿಗೆ ವಿಶೇಷ ಸನ್ಮಾನ ಮಾಡಲಿದ್ದೇವೆ,ಎಲ್ಲರೂ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಅಧ್ಯಕ್ಷರು ಮತ್ತು ಆಯೋಜಕರಾದ ಮಹಾನ್ ಕೋಟೆಯವರು ವಿನಂತಿಸಿಕೊಂಡಿದ್ದಾರೆ . ಕಾರ್ಯಕ್ರಮದ ಕೊನೆಯಲ್ಲಿ ಕ್ರಿಸ್ಮಸ್ ಸಹ ಭೋಜನ ಸಹ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಕರುನಾಡ ಕಂದ
