ನೀಲಿ ಪೆನ್ನು ಬಳಸುವ ನಾವು ಮುಂದೊಂದು ದಿನ ಹಸಿರು ಪೆನ್ನು ಬಳಸುವಂತಾಗಬೇಕು.
ನಮ್ಮ ಗುರಿ ಕಂಡು ಹುಚ್ಚ ಅಂದವರು ಸಾಧನೆ ಕಂಡು ಹುಚ್ಚು ಹಿಡಿಸಿಕೊಳ್ಳಬೇಕು.
ಹುಟ್ಟು ಬಡತನದ ಗುಡಿಸಲಲ್ಲಾದರೂ ಸಾವು ಅರಮನೆಯಲ್ಲಿ ಆಗಬೇಕು.
ಇವನ್ಯಾರೋ ನನಗೆ ಗೊತ್ತಿಲ್ಲ ಅಂದವರು ಇವನು ನಮ್ಮವನು ಎಂದು ಹಾಡಿ ಹೊಗಳಬೇಕು.
ನಮ್ಮ ಶತ್ರು ಕೂಡಾ ನಮ್ಮ ಸಾಧನೆ ಕಂಡು ಖುಷಿ ಪಡಬೇಕು.
ಚಿಟಿಕೆ ಹೊಡೆದು ಮಾತನಾಡಿಸುವ ಜನ ಚಪ್ಪಾಳೆ ಹೊಡೆದು ಸನ್ಮಾನಿಸುವಂತಾಗಬೇಕು.
ಗುರ್ ಎಂದವರು ಸರ್ ಎಂದು ಬೆಲೆ ಕೊಡುವಂತಾಗಬೇಕು.
ನಾವು ಓದಿದ ಶಾಲೆಗೆ ಮುಂದೊಂದು ದಿನ ನಾವು ಮುಖ್ಯ ಅತಿಥಿಯಾಗಿ ಹೋಗುವಂತಾಗಬೇಕು.
ನಮ್ಮನ್ನು ನೋಡಿ ತಲೆ ಎತ್ತಿ ಮಾತನಾಡುವವರು ನಮ್ಮ ಸಾಧನೆಯ ಕಂಡು ತಲೆ ತಗ್ಗಿಸುವಂತಾಗಬೇಕು.
ನಾವು ಬರೆದ ಪರೀಕ್ಷೆಗಳ ಫಲಿತಾಂಶ ಸುದ್ದಿಯಾಗಿ ಜನ ನಿಬ್ಬೆರಗಾಗುವಂತಾಗಬೇಕು
ಕಾಲು ಎಳೆದವರೇ ಕೈ ಮುಗಿದು ನಮಸ್ಕರಿಸುವಂತೆ ಆಗಬೇಕು.
ಅವಮಾನ ಅಪಮಾನ ಅನುಮಾನ ಪಟ್ಟವರೇ ಸನ್ಮಾನಿಸುವ ಹಂತಕ್ಕೆ ಬರಬೇಕು.
ನಾಡಿನ ಮೂಲೆ ಮೂಲೆಗೂ ನಮ್ಮ ಹೆಸರು ಉಳಿಯುವಂತಹ ಸಾಧನೆ ನಮ್ಮದಾಗಬೇಕು.
ಮಾತು ಬಿಟ್ಟವರೇ ತಾವಾಗಿಯೇ ಬಳಿ ಬಂದು ಮಾತನಾಡುವ ಹಂತಕ್ಕೆ ನಮ್ಮ ಸಾಧನೆಯಾಗಬೇಕು.
ಕೀಳಾಗಿ ಕಂಡು ಅಬ್ಬರಿಸಿದವರು ನಮ್ಮ ಪ್ರಗತಿ ಕಂಡು ಹುಬ್ಬೇರಿಸುವಂತಾಗಬೇಕು
ಕಡುಕಷ್ಟದಲ್ಲಿ ನಮ್ಮನ್ನು ಸಾಕಿದ ತಂದೆ ತಾಯಿ ನಮ್ಮನ್ನು ಪಡೆದದ್ದು ಸೌಭಾಗ್ಯವೆಂದು ಹೆಮ್ಮೆ ಪಡಬೇಕು
ಬಡತನದಲ್ಲೂ ಸೋತು ಬಾಗದಂತಿರಬೇಕು
ಸಿರಿತನ ಬಂದರೂ ಬೀಗದೇ ಬದುಕುವಂತಿರಬೇಕು.
-ಶ್ರೀ ಮುತ್ತು ಯ.ವಡ್ಡರ, ಶಿಕ್ಷಕರು
ಬಾಗಲಕೋಟ. 9845568484
