ಚಾಮರಾಜನಗರ/ ಹನೂರು: ರೈತರ ಕಲ್ಯಾಣಕ್ಕೆ ಸರ್ಕಾರಗಳು ಬ್ಯಾಂಕ್ ಸೇವೆ ಮತ್ತು ಸೌಲಭ್ಯಗಳನ್ನು ಸರಳೀಕರಣಗೊಳಿಸಿವೆ, ಈ ಅನುಕೂಲವನ್ನು ರೈತರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ತಹಸೀಲ್ದಾರ್ ಗುರುಪ್ರಸಾದ್ ಸಲಹೆ ನೀಡಿದರು.
ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್ ಬಿ ಐ ವತಿಯಿಂದ ಏರ್ಪಡಿಸಲಾಗಿದ್ದ ರೈತ ವಿಚಾರ ಸಂಕೀರ್ಣ ಸಂಧ್ಯಾ ಶಿಬಿರ ಉನ್ನತ ರೈತ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಎಸ್.ಬಿ.ಐ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದು ಆರ್‌ಬಿಐ ನೀತಿ ನಿಯಮಗಳಿಗೆ ಒಳಪಟ್ಟಿದೆ ರೈತರು ಅಗತ್ಯ ದಾಖಲೆಗಳನ್ನು ನೀಡಿ ಅನುಕೂಲ ಪಡೆದುಕೊಳ್ಳಬೇಕು ಎಸ್ ಬಿ ಐ ಬ್ಯಾಂಕ್ ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಎಫ್. ಐ ಮ್ಯಾನೇಜರ್ ಪವನ್ ಪೇಜ್ ಮಾತನಾಡಿ ಭಾರತೀಯ ಸ್ಟೇಟ್ ಬ್ಯಾಂಕ್ ಸಾಮಾಜಿಕ ಭದ್ರತೆ ಯೋಜನೆಗಳ ಅಭಿಯಾನದ ಕಾರ್ಯಕ್ರಮದಡಿ ಅಟಲ್ ಪಿಂಚಣಿ ಯೋಜನೆ, ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಸೇವೆಯನ್ನು ಒದಗಿಸಲಾಗುತ್ತಿದೆ.
ಈ ಯೋಜನೆಗಳಿಗೆ ಉಳಿತಾಯ ಖಾತೆಯ ವಿವರ ಅಕೌಂಟ್ ನಂಬರ್ ಖಾತೆದಾರರ ಆಧಾರ್ ಜೆರಾಕ್ಸ್ ಪ್ರತಿ, ನಾಮಿನಿ ಆಧಾರ್ ಜೆರಾಕ್ಸ್ ಪ್ರತಿಗಳನ್ನು ನೀಡಿದರೆ ಯೋಜನೆಗಳನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ ಅವರು ರೈತರ ಅಭಿವೃದ್ಧಿ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಳೆ ಸಾಲ, ಮುದ್ರಾ ಲೋನ್, ಕಾನೂನು ಸಲಹೆ, ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ವಕೀಲರಾದ ನಾಗರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಸುರೇಖಾ, ಆರ್ ಬಿ ಒ ಚೀಫ್ ಮ್ಯಾನೇಜರ್ ವೆಂಕಟರಾವ್, ಹನೂರು ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಸುಖಾಂತ್ ಘೋಷ್, ಹನೂರು ಬ್ರಾಂಚ್ ಎಫ್ ಒ ಎಸ್ ನಿತಿನ್ ಕುಮಾರ್ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.
ವರದಿ-ಉಸ್ಮಾನ್ ಖಾನ್
