ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಗುಡಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸುಬ್ರಮಣ್ಯ ಸರ್ ಅವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ತುಂಬಾ ಸೈಬರ್ ಅಪರಾಧಗಳು, ಹೆಚ್ಚಾಗಿ ಬೆಳಕಿಗೆ ಬರುತ್ತಿವೆ ಅದರಿಂದ ಜನರು ತುಂಬಾ ಜಾಗೃತೆಯಿಂದ ಯಾವುದೇ ವಂಚನೆಗೆ ಒಳಗಾಗದೆ ಅವರು ಯಾವುದೇ ಹಾನಿ ಒಳಗಾಗದೆ ಅದರಿಂದ ನಾವು ಸುರಕ್ಷಿತವಾಗಿರಬೇಕು, ಹಾಗೂ ಈಗಿನ ಯುವ ಪೀಳಿಗೆಗೆ ಸಹ ಒಂದು ಮಾತನ್ನು ವ್ಯಕ್ತಪಡಿಸುತ್ತಾರೆ.
ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಇವತ್ತಿನ ಯುವ ಪೀಳಿಗೆ ತುಂಬಾ ಜನ ಬಲಿಯಾಗುತ್ತಿದ್ದಾರೆ ಆದ್ದರಿಂದ ಎಷ್ಟೋ ಮನೆಗಳು ಸಹ ನಾಶವಾಗುತ್ತಿದ್ದಾವೆ ಹಾಗೂ ಅವರ ದೈನಂದಿನ ಚಟುವಟಿಕೆಯಲ್ಲಿ ಸಹ ಕೆಲವು ಬದಲಾವಣೆಗಳನ್ನು ಸಹ ಇವತ್ತು ನೋಡುವಂತ ಪರಿಸ್ಥಿತಿ ಇದೆ ಇದರಿಂದ ಮಾದಕ ವಸ್ತುಗಳಿಗೆ ಬಲಿಯಾಗಿ ತನ್ನ ಜೀವನವನ್ನೇ ನಾಶವಾಗಿ ಮಾಡಿಕೊಂಡಿದ್ದಾರೆ ಅದಕ್ಕೆ ಎಷ್ಟೋ ಜನ ಉದಾಹರಣೆಗಳನ್ನು ಸಹ ನಾವು ನೋಡಿದ್ದೇವೆ ಹಾಗೂ ರಸ್ತೆ ಸಂಚಾರಗಳ ಸುರಕ್ಷಿತ ಬಗ್ಗೆ ಸಹ ಅವರು ತಮ್ಮ ಸುತ್ತಮುತ್ತ ಆದಂತ ಘಟನೆಗಳ ಮೂಲಕ ವ್ಯಕ್ತಪಡಿಸುತ್ತಾರೆ ರಸ್ತೆ ಸಂಚಾರ ಮಾಡುವಾಗ ಯುವ ಪೀಳಿಗೆ, ಹಿರಿಯರಾಗಿರಲಿ, ಕಿರಿಯರಾಗಿರಲಿ, ಯಾವುದೇ ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ರಸ್ತೆ ಸಂಚಾರ ಸುರಕ್ಷತೆಗಳ ಬಗ್ಗೆ ಅದರ ಅರಿವನ್ನು ಸಹ ಮೂಡಿಸಿಕೊಂಡಿರಬೇಕು ಹಾಗೂ ರಸ್ತೆ ಸಂಚಾರ ಸುರಕ್ಷಿತ ನಿಯಮಗಳನ್ನು ಪ್ರತಿ ಹಬ್ಬ ವ್ಯಕ್ತಿಯು ಪಾಲಿಸಲೇಬೇಕು ಅದು ಅವರ ಮುಖ್ಯ ಕರ್ತವ್ಯವಾಗಿದೆ ರಸ್ತೆ ಸಂಚಾರದಲ್ಲಿ ಕೆಲವೊಂದು ತಿರುವುಗಳ ಮೂಲಕ ಅದರ ಪರಿಚಯವನ್ನು ಸಹ ಮಾಡಿಕೊಟ್ಟಿರುತ್ತೇವೆ ಅದನ್ನು ನೋಡಿ ಕಲಿಯಬೇಕು, ಇನ್ನು ರಸ್ತೆ ಸಂಚಾರ ಸುರಕ್ಷಿತ ನಿಯಮಗಳ ಬಗ್ಗೆ ಗುಡೆಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸುಬ್ರಹ್ಮಣ್ಯ ಸರ್ ಹಾಗೂ ಸಿಬ್ಬಂದಿಗಳು ಸಹ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಬುಡಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸುಬ್ರಹ್ಮಣ್ಯ ಸರ್ ಹಾಗೂ ಸಿಬ್ಬಂದಿಗಳಾದ ಮಹಾಂತೇಶ್, ನಾಗೇಶ್, ಗುರುಸ್ವಾಮಿ, ಗುಡಕೋಟೆಯ ಗ್ರಾಮಸ್ಥರು ಹಾಗೂ ಯುವಕರು ಸಹ ಪಾಲ್ಗೊಂಡಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
