ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಷನ್ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ವೃಕ್ಷ ಮಾತೆ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ ನಿಧನಕ್ಕೆ ಸಸಿ ನೆಟ್ಟು ಸಂತಾಪ ಸೂಚಿಸಲಾಯಿತು.
ಆದಿವಾಸಿ ಪರಿಸರ ಹೋರಾಟಗಾರ್ತಿ ಹಾಗೂ ಪದ್ಮಶ್ರೀ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ತುಳಸಿ ಗೌಡ (86) ಸೋಮವಾರ ಹೊನ್ನಾಳಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಇಡೀ ದೇಶವೇ ಕಂಬನಿ ಮಿಡಿಯುತ್ತದೆ, ತುಳಸಿಗೌಡ ನೆಟ್ಟ ಗಿಡಗಳು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಇವತ್ತು ಸಾವಿರಾರು ಜನರಿಗೆ ನಿದರ್ಶಗಳಾಗಿವೆ.ಅವರು ನೆಟ್ಟ ಗಿಡಮರಗಳಲ್ಲಿ ಅವರನ್ನು ಕಾಣಬಹುದಾಗಿದೆ.ಅವರ ಪರಿಸರ ಸೇವೆ ಇಡೀ ದೇಶಕ್ಕೆ ಅನನ್ಯ ಸೇವೆಯಾಗಿದೆ. ಆದ್ದರಿಂದ ಇಂದು ಅವರ ಅಗಲಿಕೆಗೆ ಗಿಡ ನೆಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ದಾರಿಯಲ್ಲಿ ಗಿಡ ನೆಡುವ ಮೂಲಕ ಅವರ ಹೆಸರು ಅಜರಾಮರವಾಗಲೆಂದು ವನಸಿರಿ ಫೌಂಡೇಷನ್ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ಸಸಿ ನೆಡಲಾಗುತ್ತಿದೆ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು,ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ PSI ವೆಂಕಟೇಶ್ ಚೌಹಾಣ,ರಾಜು ಪತ್ತಾರ,ಮುದಿಯಪ್ಪ ಹೊಸಳ್ಳಿ ಕ್ಯಾಪ್,ಶಿವಶಂಕರಪ್ಪ ಪ್ರಾಚಾರ್ಯರು ಶ್ರೀಮತಿ ಶ್ರೀದೇವಿ ಮೇಡಂ ಸಿಬಿರಾಧಿಕಾರಿಗಳು,ಶಾಮಿದ್ ಸಹಾಯಕ ಶಿಬಿರ ಅಧಿಕಾರಿಗಳು,ಪ್ರಸಾದ್ ಮತ್ತು ಹುಸೇನಪ್ಪ ಉಪನ್ಯಾಸಕರು, ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು
