ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಹುಲುಸುಗುಡ್ಡೆ
ಜೀವರಾಜ್ ಎಜುಕೇಷನಲ್ ಟ್ರಸ್ಟ್ (ರಿ.) ರಿಪಬ್ಲಿಕ್ ಇಂಟರ್ನ್ಯಾಶನಲ್ ರೆಸಿಡಿಯನ್ಸಿಯಲ್ ಸ್ಕೂಲ್ ಅಂಡ್ ಕಾಲೇಜ್ ನ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಿ. 21ರಂದು ಶನಿವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ರವೀಂದ್ರ ಜೀವರಾಜ್ ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಮಠಾಧ್ಯಕ್ಷರಾದ ಡಾ.ವಿದ್ವಾನ್ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಕಾರ್ಯಕ್ರಮದ ಉದ್ಘಾಟನೆ ಮತ್ತು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಮಾಜಿ ಶಾಸಕ ಆರ್.ನರೇಂದ್ರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಚಾಮರಾಜನಗರ ಆರ್.ಎಂ.ಓ. ಡಾ.ಮಹೇಶ್, ಜೇತವನಾದ ಬೌದ್ಧ ಬಿಕ್ಕು ಮನೋರಂಖಿತ ಬಂತೇಜಿಯವರು, ಕಂಠೀರವ ಸ್ಟುಡಿಯೋ ಮಾಜಿ ನಿರ್ದೇಶಕರಾದ ಜೆ. ಪುಟ್ಟರಾಜು, ಜೀವರಾಜ್ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರಾದ ಜಯಲಕ್ಷ್ಮಿ ಜೀವರಾಜ್, ಖಜಾಂಚಿ ವಿಜಯ್ ಭಾಸ್ಕರ್, ಎಲ್ಲಾ ನಿರ್ದೇಶಕರುಗಳು, ಆಡಳಿತಾಧಿಕಾರಿ ಮಹೇಶ್ ಪಿಎಂ ಅವರು ಉಪಸ್ಥಿತರಿಲಿದ್ದಾರೆ ಎಂದು ತಿಳಿಸಿದ್ದಾರೆ.
