ಯಾದಗಿರಿ/ಗುರುಮಿಠಕಲ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ ಅವಮಾನ ಪಡೆಸಿದ್ದಾರೆ. ಅಮಿತ್ ಶಾ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಮಂತ್ರಿಯಾಗಿ ಪರಮ ಪೂಜ್ಯ ಬಾಬಾಸಾಹೇಬ್ ಅವರ ಬಗ್ಗೆ ನಗಣ್ಯ ರೀತಿಯಲ್ಲಿ ವ್ಯಾಖ್ಯಾನಿಸಿ ಮಾತನಾಡಿರುವುದರಿಂದ ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವವಾದಿಗಳು ಮತ್ತು ಅಂಬೇಡ್ಕರ್ ಅಭಿಮಾನಿಗಳಿಗೆ ಮಾನಸಿಕವಾಗಿ ಬಹಳ ನೋವುಂಟು ಮಾಡಿದ್ದಾರೆ. ಅಲ್ಲದೇ ಇವರ ಹೇಳಿಕೆಯು ಡಾ.ಅಂಬೇಡ್ಕರ್ ವಿರೋಧಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಅಮಿತ್ ಶಾ ತಾನೊಬ್ಬ ಮೇಲು ಜಾತಿ ಅವನೆಂಬ ದುರಹಂಕಾರದಿಂದ ಇಂಥ ಹೇಳಿಕೆ ಕೊಡಲು ಸಾಧ್ಯವಾಗಿದೆ.
ಆದುದರಿಂದ ಜಗತ್ತಿನ ಎಲ್ಲಾ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಗುರುಮಿಟ್ಕಲ್ ಅಸೆಂಬ್ಲಿ ಘಟಕ ಒತ್ತಾಯಿಸುತ್ತದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಚಪೇಟ್ಲಾ ಅಧ್ಯಕ್ಷರು ಗುರುಮಠಕಲ್ ವಿಧಾನಸಭಾ ಮತ ಕ್ಷೇತ್ರ ,
ಪ್ರಕಾಶ್ ಮೌರ್ಯ ಅಸೆಂಬ್ಲಿ ಸಂಯೋಜಕರು,
ಸುರೇಶ್ ಬೂದೂರ್ ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳು,
ಕರಿಯಪ್ಪ ಯದಲಪುರ್ ಅಸೆಂಬ್ಲಿ ಕಾರ್ಯದರ್ಶಿಗಳು,
ಶ್ರೀನಿವಾಸ್ ಚಂಡರಿಕಿ ಹಾಜರಿದ್ದರು.
