ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶೌಚಾಲಯದ ತುಂಬಾ ಕೊರತೆಯನ್ನು ಅನುಭವಿಸಿದ್ದ ರೋಗಿಗಳ ಪರದಾಟ ಇನ್ನು ಮುಂದೆ ಕಮ್ಮಿ ಆಗಲಿದೆ ಇಂದು ಅಭಿಪ್ರಾಯ ಪಟ್ಟರು ಹಾಗೂ ಸಾರ್ವಜನಿಕರಾಗಲಿ ರೋಗಿಗಳಾಗಲಿ ಯಾರೇ ಆಗಲಿ ಮತ್ತು ವೈದ್ಯರು ಹಾಗು ಸಿಬ್ಬಂದಿಗಳು ಸ್ವಚ್ಛತೆಯನ್ನ ಕಾಪಾಡಿಕೊಂಡು ಯಾವುದೇ ಅಡೆ-ತಡೆಗಳು ಬಂದರೂ ಸಹ ಅದನ್ನು ಬೇಗ ಬಗೆಹರಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ವಚ್ಛತೆಯ ಅರಿವನ್ನು ಸಹ ಮೂಡಿಸಿಕೊಳ್ಳಬೇಕು ಎಂದರು.
20.12.2024 ರಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಬೋಯಿಂಗ್ ಕಂಪನಿ ವತಿಯಿಂದ ನಿರ್ಮಾಣಗೊಂಡಿರುವ ಸುಲಭ್ ಇಂಟರ್ನ್ಯಾಷನಲ್ ಶೌಚಾಲಯ ಮತ್ತು ಸ್ನಾನದ ಗೃಹಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಚಾಲನೆ ನೀಡಿದ ನಂತರ ಈ ಶೌಚಾಲಯ ಹಾಗೂ ಸ್ನಾನದ ಗೃಹಗಳು ಭಾರತೀಯ ಶೈಲಿಯಂತೆ ನಿರ್ಮಾಣಗೊಂಡಿವೆ ಅವನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡು ಹೋಗಿ ಎಂದು ಅಲ್ಲಿನ ವೈದ್ಯರಿಗೆ ಸಲಹೆಗಳನ್ನು ಕೊಟ್ಟು ಅವರಿಗೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿಯಲ್ಲಿದ್ದರು.
ವರದಿ : ಗುರುರಾಜ್ ಎಲ್ ಕಲ್ಲಹಳ್ಳಿ ಟಿ
