ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ಭಾಷೆ ಸದಾ ಶ್ರೀಮಂತ ಮತ್ತು ಸಮೃದ್ಧ

ಬೆಂಗಳೂರು : ಬರೆದದ್ದನ್ನೇ ಮಾತನಾಡಬಹುದಾದ, ಮಾತನಾಡಿದ್ದನ್ನೇ ಬರೆಯಬಹುದಾದ ವರ್ಣಮಾಲೆಯಿರುವ ಸಮೃದ್ಧ ಭಾಷೆ ಕನ್ನಡವಾಗಿದ್ದು, ಇದೊಂದು ಆತ್ಮವಿಶ್ವಾಸದ ಭಾಷೆಯಾಗಿದೆ ಎಂದು ಖ್ಯಾತ ಹಾಸ್ಯ ಸಾಹಿತಿ ಶ್ರೀ ಎಮ್. ಎಸ್. ನರಸಿಂಹ ಮೂರ್ತಿರವರು ಅಭಿಪ್ರಾಯಪಟ್ಟರು.
ಶ್ರೀಯುತರು ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ವೃತ್ತ ಕಛೇರಿಯಲ್ಲಿ ಕೆನರಾ ಬ್ಯಾಂಕ್ ಸ್ಪೆನ್ಸರ್ಸ್ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದರು.
“ಕೋವಿಡ್ ಕ್ಷೋಭೆಯ ಸಂಕಷ್ಟದ ಸಮಯದಲ್ಲಿ ಬೇರೆಲ್ಲ ವ್ಯವಸ್ಥೆಗಳು ಸ್ತಬ್ಧಗೊಂಡಿದ್ದರೂ, ಬ್ಯಾಂಕಿಂಗ್ ವ್ಯವಸ್ಥೆಯು ಮಾತ್ರ ತನ್ನ ಸೇವೆಯನ್ನು ಅನಿರ್ಬಂಧಿತವಾಗಿ ಮುಂದುವರಿಸಿಕೊಂಡು ಬಂದಿದ್ದರಿಂದ, ಭಾರತದ ಆರ್ಥಿಕ ಸ್ವಾಸ್ಥ್ಯವು ಎಲ್ಲಿಯೂ ಹದಗೆಡಲಿಲ್ಲ. ಇದರ ಹಿಂದಿದ್ದ ಬ್ಯಾಂಕಿಂಗ್ ನೌಕರರ ಮತ್ತು ಅಧಿಕಾರಿಗಳ ಸೇವೆ ಪ್ರಶಂಸಾರ್ಹ ಎಂದು ಬಣ್ಣಿಸಿದರು. ಬ್ಯಾಂಕ್‌ಗಳ ವಿಲೀನದ ಪ್ರಕ್ರಿಯೆಯ ನಂತರವೂ ಕೆನರಾ ಬ್ಯಾಂಕ್ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಭಾರತ ದೇಶದ ಬಲಿಷ್ಠವಾದ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವೆಂದು ಅಭಿಪ್ರಾಯ ಪಟ್ಟರು.

ಕೆನರಾ ಬ್ಯಾಂಕ್ ನ ಮುಖ್ಯ ಮಹಾ ಪ್ರಬಂಧಕರಾದ ಶ್ರೀಯುತ ಪುಷ್ಕರ್ ಸಿನ್ನಾರವರು ತಮ್ಮ ಆಶಯ ನುಡಿಯಲ್ಲಿ ‘ಕನ್ನಡೇತರರು ಉದ್ಯಮ ಮತ್ತು ವೃತ್ತಿಯನ್ನು ಕರ್ನಾಟಕದಲ್ಲಿ ನಿರ್ವಹಿಸಲು ಕನ್ನಡಿಗರು ತೆರೆದ ಬಾಹುಗಳಿಂದ ಅವಕಾಶ ನೀಡುತ್ತಿರುವುದರಿಂದ ಕರ್ನಾಟಕ ರಾಜ್ಯವು ಹೆಚ್ಚು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ’ ಎಂದು ಕನ್ನಡಿಗರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದರು.
ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಖ್ಯಸ್ಥರಾದ ಮಹಾ ಪ್ರಬಂಧಕ ಶ್ರೀಯುತ ಮಹೇಶ್ ಎಮ್ ಪೈಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕರ್ನಾಟಕದಲ್ಲಿ ನೌಕರಿ ಮಾಡುತ್ತಿರುವ ಅನ್ಯ ಭಾಷಿಕ ಸಿಬ್ಬಂದಿಯು, ಸ್ಥಳೀಯ ಭಾಷೆಯಾದ ಕನ್ನಡವನ್ನು ಕಲಿತುಕೊಂಡು ಬ್ಯಾಂಕಿಂಗ್ ಸೇವೆಯನ್ನು ನೀಡಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳಿದರು.
ರಾಜ್ಯೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿ ಗಣ್ಯರಿಂದ ಬಹುಮಾನಗಳನ್ನು ವಿತರಿಸಲಾಯಿತು. ಕನ್ನಡ ರಾಜ್ಯೋತ್ಸವದಲ್ಲಿ ಕನ್ಮಡೇತರರೂ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದದ್ದು ಗಮನಾರ್ಹವಾಗಿತ್ತು. ಬ್ಯಾಂಕ್ ನೌಕರರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕರ್ನಾಟಕ ರಾಜ್ಯದ ಸೊಗಡನ್ನು ಸಾರುವ ಜನಪದ ಕಲೆಯಾದ ಡೊಳ್ಳು ಕುಣಿತ ಸಮಾರಂಭದ ಮುಖ್ಯ ಆಕರ್ಷಣೆಯಾಗಿತ್ತು.
ಉಪ ಮಹಾ ಪ್ರಬಂಧಕರಾದ ಶ್ರೀಯುತ ಆರ್. ಗಣೇಶ್‌ರವರು ಸ್ವಾಗತಿಸಿದರು. ಮಹಾಪ್ರಬಂಧಕರಾದ ಶ್ರೀಮತಿ ಕೆ ಬಿ ಗೀತರವರು ಅತಿಥಿಗಳ ಪರಿಚಯವನ್ನುಮಾಡಿಕೊಟ್ಟರು. ಶ್ರೀಮತಿ ಶೈಲಾ ಮಮತಾಪುರ್, ಶ್ರೀಮತಿ ಇಂದುಮತಿ ಠಾಣ್ಗೆ ಮತ್ತು ಮಂಜುನಾಥರವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಿಸಿದರು. ಸಹಾಯಕ ಮಹಾ ಪ್ರಬಂಧಕರಾದ ಶ್ರೀಯುತ ರಮೇಶ್‌ ಬಿಳೂರ್ಕರ್ ವಂದಿಸಿದರು. ಬ್ಯಾಂಕಿನ ಹಿರಿಯ ಅಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ