ಶಿವಮೊಗ್ಗ/ ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಅನುದಾನದ ಅನುಮೋದಿತ ಕ್ರಿಯಾಯೋಜನೆಯಲ್ಲಿ ಈ ಕೆಳಕಂಡ ಕಾಮಗಾರಿಗಳನ್ನು ಪ್ರಾರಂಭ ಮಾಡಲು ಸ್ಥಳ ಪರಿಶೀಲನ್ನು ಮಾಡಿ ಅಂದಾಜು ಪಟ್ಟಿ ತಯಾರಿಸಲಾಯಿತು.
1.-ಹುಣಸವಳ್ಳಿ ಗ್ರಾಮದ ಪ.ಜಾ ಸಮುದಾಯ ಭವನ ಎದುರಿಗೆ ಇಂಟೆರ್ ಲಾಕ್ ಅಳವಡಿಸುವುದು 2-.ಗ್ರಾಮಪಂಚಾಯತ್ ಕಚೇರಿ ಅವರಣಕ್ಕೆ ಇಂಟರ್ ಲಾಕ್ ಅಳವಡಿಸುವುದು 3.-ಅಂಗವಿಕಲರ ವಿಶ್ರಾಂತಿ ಕೊಠಡಿ ಎದುರಿಗೆ ಇಂಟರ್ ಲಾಕ್ ಅಳವಡಿಸುವುದು
4.-ಹೆಗ್ಗೆಬೈಲ್ ನಾಗೇಂದ್ರಚಾರ ಅರುಣಾ ಅವರ ಮನೆಯ ಹತ್ತಿರ ಬಾಕ್ಸ್ ಚರಂಡಿ ಕಾಮಗಾರಿಗಳನ್ನು ಪ್ರಾರಂಬಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಂಡೆ ವೆಂಕಟೇಶ್ ಇಂಜಿನಿಯರ್ ರವೀಂದ್ರಸರ್ ಹೆಗ್ಗೆಬೈಲ್ ನಾಗೇಂದ್ರಆಚಾರ್ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
