ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಕಲಾಭಾರತಿ ಕಲಾ ಸಂಘ (ರಿ.) ಕೊಡಮಾಡುವ 2024 ನೇ ಸಾಲಿನ ಆದರ್ಶ ದಂಪತಿ ಗೌರವ ಪ್ರಶಸ್ತಿಗೆ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ದಂಪತಿಯನ್ನು ಆಯ್ಕೆ ಮಾಡಲಾಗಿದ್ಧು ದಿನಾಂಕ 23-12-2024 ಸೋಮವಾರ ಹಿರೇಹೆಗ್ಡಾಳ್ ಗ್ರಾಮದ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ ಎಂದು ಸಂಘಟಿಕರಾದ ಬಣಕಾರ ಮೂಗಪ್ಪ ತಿಳಿಸಿದ್ದಾರೆ.
