ಕನ್ನಡ ನಾಡು ನುಡಿ ಅಭ್ಯುದಯಕ್ಕೆ ನಿರಂತರ ಸೇವೆ ಮಾಡುತ್ತಾ ತಮ್ಮ ಜೀವನವನ್ನೇ ಸಮರ್ಪಿಸಿ ಕೊಂಡವರನ್ನು ಗುರ್ತಿಸಿ ಗೌರವಿಸದಿದ್ದರೆ , ಅವರಿಗೆ ಬೆನ್ನು ತಟ್ಟಿ ಹೊಸ ಹುರುಪು ನೀಡದಿದ್ದರೆ ಸಮಾಜದಲ್ಲಿ ನಾಡುನುಡಿಗಾಗಿ ಕೆಲಸ ಮಾಡುವವರೇ ಇಲ್ಲವಾಗಿ ಬಿಡುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಧಾರವಾಡದ ಜನಚೇತನ ಫೌಂಡೇಶನ್ ಹಾಗೂ ಕರ್ನಾಟಕ ಚಲನಚಿತ್ರ ಕ್ಷೇಮಾಭಿವೃದ್ಧಿ ಮಂಡಳಿ ಸಂಸ್ಥೆಗಳು ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡುತ್ತಾ ರಾಷ್ಟ್ರದ ಸ್ವತಂತ್ರ ಹೋರಾಟದಲ್ಲಿ ,ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿದ ಲಕ್ಷಾಂತರ ಸಾಧಕರಿದ್ದಾರೆ. ಅದೇ ರೀತಿ ಕನ್ನಡ ನಾಡು ನುಡಿ ಅಭುದ್ಯಯಕ್ಕಾಗಿ ತಮ್ಮ ಜೀವನದ ಮಹತ್ವದ ಗಳಿಗೆಗಳನ್ನು ಮೀಸಲಿಟ್ಟಿರುವ ಸಾವಿರಾರು ಮಹನೀಯರಿದ್ದಾರೆ. ಎಲ್ಲಾದರೂ ಕನ್ನಡ ನಾಡು ನುಡಿಗೆ ಧಕ್ಕೆ ಉಂಟಾದರೆ ಬೀದಿಗಿಳಿಯುವ ಸಾವಿರಾರು ಜನ ಕನ್ನಡ ಸೇವಕರಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಇಂತಹವರನ್ನು ಗುರ್ತಿಸಿ ಗೌರವಿಸಬೇಕು ಸಮಾಜ ಇಂತವರ ಬಗ್ಗೆ ನಿರ್ಲಕ್ಷ ವಹಿಸಿದರೆ ನಾಡು ನುಡಿ ವಿನಾಶದತ್ತ ಸಾಗುವುದು ಖಚಿತ ಎಂದು ಕಿವಿಮಾತು ನುಡಿದರು.
ವರಕವಿ ದ. ರಾ.ಬೇಂದ್ರೆ ಅವರ ತವರು ಧಾರವಾಡದಲ್ಲಿ ಜನಚೇತನ ಫೌಂಡೇಶನ್ ನಡೆಸಿರುವ ಸುವರ್ಣ ರಾಜ್ಯೋತ್ಸವ ಕಾರ್ಯಕ್ರಮ ಶ್ಲಾಘನೀಯ ಎಂದು ನುಡಿದ ಅವರು ಕನ್ನಡ ನಾಡು ನುಡಿ ಸೇವೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡವರಿಗೆ ಅಧ್ಯತೆ ನೀಡುವ ಕೆಲಸವಾಗಬೇಕು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ , ಸಾಹಿತ್ಯ ಸಮ್ಮೇಳನ ಗಳಲ್ಲಿ ಗುರುತಿಸುವಾಗ ಶೇಕಡಾ ನಲವತ್ತರ ಸ್ಟು ಕನ್ನಡಪರ. ಚಿಂತಕರನ್ನು ಗುರ್ತಿಸುವ ಕಾರ್ಯನಡೆಯಬೇಕು.ಈ ಬಗ್ಗೆ ರಾಜ್ಯದ ಎಲ್ಲ ಕನ್ನಡಪರ ಚಿಂತಕರು ಚಿಂತಿಸುವ ಅಗತ್ಯ ಇದೆ ಎಂದು ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸೇವೆ ಹೆಸರಿನಲ್ಲಿ ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸುವುದು, ವೇದಿಕೆ ನೀಡುವುದು ಖಂಡನೀಯ ಎಂದವರು ನುಡಿದರು.
ಬೆಳಗಾವಿ,ಕೋಲಾರ, ಬಳ್ಳಾರಿ,ಚಾಮರಾಜನಗರ ಮೊದಲಾದ ಗಡಿ ಜಿಲ್ಲೆಗಳಲ್ಲಿ ಕನ್ನಡ ನಾಡು ನುಡಿ ಉಳಿವಿಗಾಗಿ ತಮ್ಮ ಜೀವನವನ್ನೇ ಮೀಸಲಿಟ್ಟವರಿದ್ದಾರೆ.ಹಲವಾರು ನಾಡು, ನುಡಿ, ನೆಲ,ಜಲಗಳಿಗಾಗಿ ತಮ್ಮನ್ನೇ ಸಮರ್ಪಿಸಿ ಕೊಂಡವರಿದ್ದಾರೆ.ಇವರನ್ನು ಗುರ್ತಿಸಿ ಗೌರವಿಸದಿದ್ದರೆ ಭವಿಷ್ಯದಲ್ಲಿ ನಾಡು ನುಡಿಗಾಗಿ ಹೋರಾಟ ಮಾಡುವವರೇ ಇಲ್ಲವಾಗುತ್ತಾರೆ ಎಂದವರು ಆತಂಕ ವ್ಯಕ್ತಪಡಿಸಿದರು.
