ಬೆಂಗಳೂರು : ಕರ್ನಾಟಕದ ಚಾಲಕ ಸಮೂಹದ ಹಲವು ದಶಕಗಳ ಕನಸು ನನಸಾಗಿದೆ. ಖಾಸಗಿ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆ ಈಡೇರಿದೆ.
ಹೌದು.. ಖಾಸಗಿ ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಡಿಯಲ್ಲಿ ಚಾಲಕರಿಗೆ ಆರೋಗ್ಯ ಕಾರ್ಡ್ ನೀಡಲು ತೀರ್ಮಾನ ಮಾಡಲಾಗಿದೆ. ದೇಶದಲ್ಲಿ ಇದೆ ಮೊದಲ ಬಾರಿಗೆ ಇಂತಹ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ. ಈ ಹಿಂದೆ ಚಾಲಕರು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹವರ ಕುಟುಂಬಕ್ಕೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗಿತ್ತು, ಇದೀಗ ಸರ್ಕಾರ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿತ ಚಾಲಕ ಆಕ್ಸಿಡೆಂಟ್ ಮತ್ತು ಸಹಜವಾಗಿ ಮೃತಪಟ್ಟರೇ ಅಂತಹ ಚಾಲಕರಿಗೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ.
ಚಾಲಕರಿಗೆ ಏನೆಲ್ಲ ಸೌಲಭ್ಯ ?
ಇನ್ನೂ ಅಧಿವೇಶನದಲ್ಲಿ ಪಾಸ್ ಆದ ಬಿಲ್ ನಲ್ಲಿ ಚಾಲಕರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತದೆ ಎಂದು ನೋಡುವುದಾದರೆ, ನೋಂದಾಯಿತ ಸದಸ್ಯರು ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 5 ಲಕ್ಷ ರೂಪಾಯಿ ವರೆಗೆ ಕ್ಯಾಶ್ಲೆಸ್ ವ್ಯವಸ್ಥೆ. 50 ರಿಂದ 1 ಲಕ್ಷದವರೆಗೆ ಯಾವುದೇ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದುಕೊಂಡು ಬಿಲ್ ಪಾವತಿ ಮಾಡಿದ್ರೆ, ಆ ಬಿಲ್ ನಲ್ಲಿ ಒಂದು ಲಕ್ಷ ರುಪಾಯಿವರೆಗೆ ಹಣವನ್ನು ಮಂಡಳಿಗೆ ಬಿಲ್ ನೀಡಿ ಮರುಪಾವತಿ ಮಾಡಿಕೊಳ್ಳಬಹುದು.
ಮಹಿಳಾ ಚಾಲಕಿಯರಿಗೆ ಏನು?
ಮಹಿಳಾ ಚಾಲಕಿಯರಿಗೆ ಎರಡು ಮಕ್ಕಳಿಗೆ ಹೆರಿಗೆ ಭತ್ಯೆಯ ರೂಪದಲ್ಲಿ ತಲಾ ಹತ್ತು ಸಾವಿರ ರುಪಾಯಿ ನೀಡಲಾಗುತ್ತದೆ..ನೋಂದಾಯಿಸಲ್ಪಟ್ಟ ಚಾಲಕ ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹ ಚಾಲಕನ ಮಕ್ಕಳಿಗೆ 1 ರಿಂದ ಡಬಲ್ ಡಿಗ್ರಿವರೆಗೆ ಹತ್ತು ಸಾವಿರದಿಂದ 25 ಸಾವಿರದವರೆಗೆ ಸಹಾಯಧನ ನೀಡಲಾಗುತ್ತದೆ. ಯಾರಿಗೆಲ್ಲಾ ಈ ಸೌಲಭ್ಯ ದೊರೆಯುತ್ತದೆ ಎಂದು ನೋಡುವುದಾದರೆ, ಆಟೋ ಚಾಲಕರು, ಕ್ಯಾಬ್ ಡ್ರೈವರ್, ಖಾಸಗಿ ಬಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಲಾರಿ ಚಾಲಕರು, ಖಾಸಗಿ ಬಸ್ ಕಂಡಕ್ಟರ್, ಕ್ಲಿನರ್, ಮೆಕಾನಿಕ್, ವಾಹನಗಳ ಪೇಂಟರ್, ವೆಲ್ಡರ್ಸ್, ಬಾಡಿ ಬಿಲ್ಡರ್ಸ್ ಗಳು ಪಡೆದುಕೊಳ್ಳಬಹುದು.
ಆದರೆ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರಬೇಕಷ್ಟೇ ಅಂತಾರೇ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ.
ಒಟ್ಟಿನಲ್ಲಿ ದೇಶದ ಯಾವುದೇ ಸರ್ಕಾರವು ಮಾಡದ್ದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿರೋದು ನಿಜಕ್ಕೂ ಚಾಲಕರ ಹಲವು ದಶಕಗಳ ಕನಸನ್ನು ನನಸು ಮಾಡಲು ಮುಂದಾಗಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
