ಶಿವಮೊಗ್ಗ/ ತೀರ್ಥಹಳ್ಳಿ : ಪ್ರಸಿದ್ಧ ಶ್ರೀ ರಾಮೇಶ್ವರ ಜಾತ್ರೆಯ ತಯಾರಿಯ ಬಗ್ಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಿವಮೊಗ್ಗ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಶ್ರೀ ಆರ್ ಎಂ ಮಂಜುನಾಥ ಗೌಡ ಮತ್ತು ಮಾಜಿ ಶಾಸಕ ಶ್ರೀ ಕಿಮ್ಮನೆ ರತ್ನಾಕರ ಅವರು ಜಾತ್ರಾ ಸಮಿತಿ ಸಂಚಾಲಕರಾದ ಡಾ. ಸುಂದರೇಶ್ ಸಮಿತಿಯ ಪ್ರಮುಖರು ತುಂಗಾ ನದಿಯ ಛತ್ರಕೇರಿ ಭಾಗದಲ್ಲಿ ರಸ್ತೆ ಬಗ್ಗೆ ಮತ್ತು ಸ್ವಚ್ಚತಾ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ದೂರದ ಊರುಗಳಿಂದ ತೀರ್ಥಹಳ್ಳಿಗೆ ಆಗಮಿಸುವರಿಗೆ ನದಿಯಲ್ಲಿ ಸ್ಥಾನ ಮಾಡುವಾಗ ಮುನ್ನೆಚ್ಚರಿಕೆಗಾಗಿ ನದಿಯ ಇಕ್ಕೆಲಗಳಲ್ಲಿ ಜಾಗ್ರತೆ ಫಲಕ ಹಾಕುವಂತೆ ಸೂಚಿಸಿ ಪಟ್ಟಣದ ಮುಖ್ಯ ಆರ್ಕಷಣೆಯಾಗಿರುವ ತುಂಗಾ ಸೇತುವೆಗೆ ಸಂಪೂರ್ಣ ಬಣ್ಣ ಹೊಡೆಯುವಂತೆ ಅಧಿಕಾರಿಗಳಿಗೆ ಶ್ರೀ ಆರ್ ಎಂ ಮಂಜುನಾಥ ಗೌಡರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ರಾಮೇಶ್ವರ ದೇವರ ಜಾತ್ರೆಗೆ ಎಲ್ಲರೂ ನಮ್ಮೂರು ತೀರ್ಥಹಳ್ಳಿಗೆ ಬರಬೇಕೆಂದು ಅವರು ಆತ್ಮೀಯವಾಗಿ ವಿನಂತಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
